ಚಿಕ್ಕಮಗಳೂರು: ರಾತ್ರೋರಾತ್ರಿ ದುಷ್ಕರ್ಮಿಗಳು 2 ಎಕರೆಯಲ್ಲಿ ಬೆಳೆದಿದ್ದ 1300 ಬಾಳೆ ಗಿಡಗಳನ್ನು ಕಡಿದು ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ. ಕಾರೆಹಳ್ಳಿ ಕಾಲೊನಿಯಲ್ಲಿ ನಡೆದಿದೆ.
ರೈತ ಚಂದ್ರಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬಾಳೆಯನ್ನು ಕಿಗೇಡಿಗಳು ನಾಶ ಮಾಡಿದ್ದಾರೆ. ಬೆಳಗ್ಗೆ ತೋಟಕ್ಕೆ ಹೋದಾಗ ದುಷ್ಟರ ಕೃತ್ಯ ಬೆಳಕಿಗೆ ಬಂದಿದೆ.
ರೈತ ಚಂದ್ರಪ್ಪ ಸಾಲ ಮಾಡಿ 2 ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಗೊನೆ ಹೊಡೆಯುವ ಹಂತದಲ್ಲಿದ್ದ ಬೆಳೆಯನ್ನು ಕಳೆದುಕೊಂಡು ರೈತ ಕುಟುಂಬ ಕಂಗಾಲಾಗಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಕೌಟುಂಬಿಕ ಕಲಹ -ಗೃಹಿಣಿ ಆತ್ಮಹತ್ಯೆ!


















