ಕಲಬುರಗಿ: ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ಮಧ್ಯೆ ನಿರಂತರ ಯುದ್ಧದ ಹಿನ್ನೆಲೆ ಕಲಬುರಗಿಯಲ್ಲಿ LPG ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ತಲೆದೂರಿದ್ದು, ಗ್ಯಾಸ್ ಸಿಲಿಂಡರ್ ಸಿಗದೆ ಗೃಹಿಣಿಯರು ಕಣ್ಣೀರು ಹಾಕುತ್ತಿದ್ದಾರೆ.
ಗೃಹಬಳಕೆ ಸಿಲಿಂಡರ್ ಗಾಗಿ ಪರದಾಡ್ತಿರುವ ಕಲಬುರಗಿ ಜನ ದಿನಗಳ ಗಟ್ಟಲೆ ಏಜೆನ್ಸಿಗಳ ಮುಂದೆ ಕ್ಯೂ ನಿಂತರೂ ಸಿಲಿಂಡರ್ ಸೀಗದ ಹಿನ್ನೆಲೆ
ನಗರದ ಜಯನಗರ ಬಡಾವಣೆಯ ಏಜೆನ್ಸಿ ಮುಂದೆ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಸಿಲಿಂಡರ್ ಬುಕ್ ಮಾಡಿ ವಾರ ಕಳೆದರೂ ಸಿಲಿಂಡರ್ ಸೀಗದೆ ನಿತ್ಯ ಏಜೆನ್ಸಿಗಳಿಗೆ ಮಹಿಳೆಯರು ಅಲೆಯುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಏಜೆನ್ಸಿ ಅವರು ಬ್ಲಾಕ್ ನಲ್ಲಿ ಸಿಲಿಂಡರ್ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಕಲಬುರಗಿ ಜಿಲ್ಲೆಯ ಎಲ್ಲಾ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ಹಿಡಿದು ಕ್ಯೂ ನಿಂತ ಜನ ಗೃಹಬಳಕೆ ಗ್ಯಾಸ್ ಸಿಲಿಂಡರ್ ಪೂರಕೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮುಖ್ಯವಾದದನ್ನು ಬಿಟ್ಟು ಗೇಟ್‌ಗಳ ಬದಲಾವಣೆಗೆ ಮುಂದಾಗಿದೆ ತುಂಗಭದ್ರಾ ಮಂಡಳಿ : ಸಾರ್ವಜನಿಕರಿಂದ ಟೀಕೆ



















