ಕಾರವಾರ : ಬಾವಿಗೆ ಬಿದ್ದಿದ್ದರೂ ಪವಾಡ ಸದೃಶ್ಯವಾಗಿ ಎರಡು ವರ್ಷದ ಕಂದಮ್ಮ ಬದುಕುಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ ಬಾ ನಗರದಲ್ಲಿ ನಡೆದಿದೆ.
ಕಸ್ತೂರ ಬಾ ನಗರದ ಭುವಿ(2) ಬದಕುಳಿದ ಮಗು. ಆಟವಾಡುತ್ತ ಭುವಿ ಏಕಾಏಕಿ ನಾಪತ್ತೆಯಾಗಿದ್ದಳು. ಇದರಿಂದ ಪೊಷಕರು ಆತಂಕಗೊಂಡು ಮನೆ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ.
ಕೊನೆಗೆ ಮನೆಯ ಮುಂದಿನ ಬಾವಿಯಲ್ಲಿ ನೋಡಿದಾಗ ಮಗು ಅಳುವ ಶಬ್ದ ಕೇಳಿದೆ. ಕೂಡಲೇ ಬ್ಯಾಟರಿ ಬಿಟ್ಟು ನೋಡಿದಾಗ ಮಗು ಬಾವಿಯೊಳಗೆ ಪೈಪ್ಗೆ ಸಿಲುಕಿರುವುದು ಕಂಡುಬಂದಿದ್ದು, ತಕ್ಷಣವೇ ಪಯ್ಯ ಚವಟಿ ಎಂಬ ವ್ಯಕ್ತಿ ಬಾವಿಗೆ ಇಳಿದು ಮಗುವನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ‘ಎಲ್ಲರನ್ನೂ ಕ್ಷಮಿಸಿಬಿಡು, ಹೋಗುವ ಸಮಯ ಬಂದಿದೆ’ – ದಯಾಮರಣಕ್ಕೆ ಸಿದ್ಧನಾದ ಹರೀಶ್ ರಾಣಾಗೆ ಕಣ್ಣೀರಿನ ವಿದಾಯ!



















