ಹುಬ್ಬಳ್ಳಿ : ದೇವಸ್ಥಾನದ ಹುಂಡಿಯನ್ನೂ ಸಹ ಬಿಡದ ಖದೀಮರು ಹುಬ್ಬಳ್ಳಿಯ ಬಮ್ಮಾಪೂರ ಓಣಿಯಲ್ಲಿರುವ ಬಾಲ ಮಾರುತಿ ದೇವಸ್ಥಾನದ ಹುಂಡಿನ್ನು ಕದ್ದೊಯ್ದಿದ್ದಾರೆ.
ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಾಲ ಮಾರುತಿ ಟೆಂಪಲ್‌ನಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಕಳ್ಳರು ದೇವಸ್ಥಾನ ಬಾಗಿಲು ಒಡೆದು, ಹುಂಡಿ ಕಳ್ಳತನ ಮಾಡಿದ್ದಾರೆ. ಈ ಘಟನಾ ಸಂಬಂಧ ಜಿಲ್ಲೆಯ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಲೆ ಮಾದಪ್ಪನ ದಾಸೋಹಕ್ಕಿಲ್ಲ ಗ್ಯಾಸ್ ಟ್ರಬಲ್ – ಕಾರ್ಯದರ್ಶಿ ರಘು ಸ್ಪಷ್ಟನೆ!



















