ಬೆಂಗಳೂರು: ನೀವು ವಾಹನ ಸಾಲ, ಮನೆ ಸಾಲ ಮಾಡಿದ್ದರೀರಾ? ನೀವು ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದೀರಾ? ಹಾಗಾದರೆ, ನಿಮಗೊಂದು ಕಹಿ ಸುದ್ದಿ ಇದೆ. ಸಾಲದ ಮೇಲಿನ ಬಡ್ಡಿದರವನ್ನು ನಿರ್ಧರಿಸುವ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್-ಬೇಸ್ಟ್ ಲೆಂಡಿಂಗ್ ರೇಟ್ ನಲ್ಲಿ 10 ಬೇಸಿಸ್ ಪಾಯಿಂಟ್ ಗಳನ್ನು ಏರಿಕೆ ಮಾಡಿದೆ. ಇದರಿಂದಾಗಿ ಮಾಸಿಕ ಇಎಂಐ ಈಗ ಇನ್ನಷ್ಟು ಹೊರೆಯಾಗಲಿದೆ. ಇದು ಸಾಲಗಾರರಿಗೆ ಕಹಿ ಸುದ್ದಿಯಾದಂತಾಗಿದೆ.
ಏನಿದು ಎಂಸಿಎಲ್ಆರ್?
ಸಾಲದ ಮೇಲಿನ ಬಡ್ಡಿದರವನ್ನು ನಿರ್ಧರಿಸಲು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್-ಬೇಸ್ಟ್ ಲೆಂಡಿಂಗ್ ರೇಟ್ (MCLR) ಮಾನದಂಡವಾಗಿದೆ. ಅಂದರೆ, ಬ್ಯಾಂಕುಗಳು ಸಾಲ ನೀಡುವಾಗ ವಿಧಿಸುವ ಕನಿಷ್ಠ ಬಡ್ಡಿ ದರ. ಇದು ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳಂತಹ ಫ್ಲೋಟಿಂಗ್ ರೇಟ್ ಸಾಲಗಳಿಗೆ ಮಾನದಂಡವಾಗಿದೆ. ಹಾಗಾಗಿ, ಆರ್ ಬಿಐ 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಸಿರುವುದು ಸಾಲಗಾರರಿಗೆ ಅನುಕೂಲವಾಗಲಿದೆ.
ಕೆನರಾ ಬ್ಯಾಂಕ್ ಬಡ್ಡಿದರದ ವಿವರ
• ದೀರ್ಘಾವಧಿಯ ಸಾಲಗಳ ಮೇಲಿನ ಎಂಸಿಎಲ್ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು (0.10%) ಏರಿಸಿದೆ.
• ಎರಡು ವರ್ಷಗಳ ಅವಧಿಯ ಎಂಸಿಎಲ್ಆರ್ ದರವು ಶೇ. 8.85 ರಿಂದ ಶೇ. 8.95 ಕ್ಕೆ ಏರಿಕೆಯಾಗಿದೆ.
• ಮೂರು ವರ್ಷಗಳ ಅವಧಿಯ ಎಂಸಿಎಲ್ಆರ್ ದರವು ಶೇ. 8.90 ರಿಂದ ಶೇ. 9.00 ಕ್ಕೆ ಏರಿಕೆಯಾಗಿದೆ.
• ಹೊಸ ದರಗಳು ಮಾರ್ಚ್ 12, 2026 ರಿಂದ ಜಾರಿಗೆ ಬಂದಿವೆ.
• ಓವರ್ ನೈಟ್ ಮತ್ತು ಒಂದು ವರ್ಷದ ಅವಧಿಯ ಎಂಸಿಎಲ್ಆರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಐಡಿಬಿಐ ಬ್ಯಾಂಕ್ ಬಡ್ಡಿದರ ಎಷ್ಟಿದೆ?
ಐಡಿಬಿಐ ಬ್ಯಾಂಕ್ ಕೂಡ ವಿವಿಧ ಅವಧಿಯ ಸಾಲಗಳ ಮೇಲೆ ಹೊಸ ಎಂಸಿಎಲ್ಆರ್ ದರಗಳನ್ನು ಪ್ರಕಟಿಸಿದೆ. ಒಂದು ವರ್ಷದ ಅವಧಿಯ ಎಂಸಿಎಲ್ಆರ್ ಶೇ. 8.65 ರಷ್ಟಿದ್ದರೆ, ಎರಡು ವರ್ಷಕ್ಕೆ ಶೇ. 9.25 ಮತ್ತು ಮೂರು ವರ್ಷಕ್ಕೆ ಶೇ. 9.65 ರಷ್ಟಿದೆ. ಹಾಗೆಯೇ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮಾರ್ಚ್ 15 ರಿಂದ ಜಾರಿಗೆ ಬರುವಂತೆ ಒಂದು ತಿಂಗಳ ಅವಧಿಯ ಎಂಸಿಎಲ್ಆರ್ ದರವನ್ನು ಶೇ. 0.10 ರಷ್ಟು ಇಳಿಕೆ ಮಾಡಿದೆ. ಇದರಿಂದ ಸಾಲಗಾರರ ಇಎಂಐ ಹೊರೆ ಕಡಿಮೆಯಾಗಲಿದೆ.
ಇದನ್ನೂ ಓದಿ : ವರ್ಗಾವಣೆಗೊಂಡ ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ : ಏನದು?



















