ಬೆಂಗಳೂರು : 5 ಲಕ್ಷ ಲಂಚ ಪಡೆದ ಆರೋಪದಡಿ ಜೈಲು ಸೇರಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಜಾಮೀನು ಸಿಕ್ಕ ಹಿನ್ನೆಲೆ ನಿನ್ನೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಗದಗದ ಶಿರಹಟ್ಟಿ ಶಾಸಕರಾಗಿರುವ ಚಂದ್ರು ಲಮಾಣಿ ಕಳೆದ 15 ದಿನದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯ ಚಂದ್ರು ಲಮಾಣಿಗೆ 2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಇಂದು ಎಲ್ಲ ಪ್ರೊಸೀಜರ್ ಮುಗಿಸಿ ಬಿಡುಗಡೆಗೊಂಡಿದ್ದಾರೆ.
ನೆಚ್ಚಿನ ಶಾಸಕನ ಬಿಡುಗಡೆಯಿಂದ ಚಂದ್ರು ಲಮಾಣಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಚಂದ್ರು ಲಮಾಣಿ ಕ್ಷೇತ್ರದಿಂದ ಅಭಿಮಾನಿಗಳು ಆಗಮಿಸಿದ್ದರು. ಬಿಡುಗಡೆಯಾಗುತ್ತಿದ್ದಂತೆ ಚಂದ್ರು ಲಮಾಣಿ ಚೆಕ್ ಪೋಸ್ಟ್ ಬಳಿಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದಿದ್ದಾರೆ.
ಇದನ್ನೂ ಓದಿ : ಅಸ್ಸಾಂನ 10ಕ್ಕೂ ಹೆಚ್ಚು ‘ಕೈ’ ಶಾಸಕರು ಬೆಂಗಳೂರಿಗೆ ಶಿಫ್ಟ್!



















