ಹುಬ್ಬಳ್ಳಿ | ಮನೆಯಿಂದ ಹೊರಹೋದ ಜೀವದ ಗೆಳೆಯರು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘೋರ ದುರಂತ ಹುಬ್ಬಳ್ಳಿಯ ನವನಗರದ ಆರ್‌ಎನ್ ಶೆಟ್ಟಿ ಗಲ್ಫ್ ಗ್ರೌಂಡ್ ಬಳಿ ನಡೆದಿದೆ.
ಬೈರಿದೇವರಕೊಪ್ಪದ ರೇಣುಕಾ ನಗರದ ಸಮರ್ಥ (17) ಹಾಗೂ ಹರೀಶ (17) ಮೃತ ದುರ್ದೈವಿಗಳು. ಒಂದೇ ಕಾಲೋನಿಯಲ್ಲಿ ವಾಸಿಸುತ್ತಿದ್ದ ಗೆಳೆಯರು, ಮನೆಯ ಬಳಿ ಯಲ್ಲಮ್ಮನ ಪೂಜೆ ತಯಾರಿಗೆ ತೆರಳಿ ಪೂಜೆಯ ಕೆಲಸ ಕಾರ್ಯದಲ್ಲಿ ಭಾಗಿಯಾಗಿದ್ದರು.
ಆ ಬಳಿಕ ಮಧ್ಯಾಹ್ನ ನಂತರ ಈಜಲು ತೆರಳಿದ್ದ ಬಾಲಕರು, ನವನಗರದ ಆರ್‌ಎನ್ ಶೆಟ್ಟಿ ಗಲ್ಫ್ ಗ್ರೌಂಡ್‌ಗೆ ತೆರಳಿದ್ದರು. ಅಲ್ಲಿನ ಹೊಂಡಕ್ಕೆ ಇಳಿದಿದ್ದ ಇಬ್ಬರು ಸ್ನೇಹಿತರು, ಈಜು ಬಾರದ ಕಾರಣ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇನ್ನು, ಮನೆಯಿಂದ ಹೊರ ಹೋಗಿದ್ದ ಮಗ ಸಮರ್ಥಗಾಗಿ ತಾಯಿ ಹುಡುಕಾಟ ನಡೆಸಿದ್ದು, ಪೋಲೀಸರ ಬಳಿ ಕೇಳಿದಾಗ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರು ಬಾಲಕರ ಮೃತ ದೇಹ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಹೀರೋ ಸಂಜು ಆಟದಲ್ಲಿ ವಿವ್ ರಿಚರ್ಡ್ಸ್ ಛಾಯೆ | ಮಾಜಿ ಆಟಗಾರನ ಶ್ಲಾಘನೆ!



















