ಬೆಂಗಳೂರು : ನಿನ್ನೆ(ಮಾ.8) ಸಂಜೆ 6 ಗಂಟೆ ವೇಳೆಗೆ ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ಕೆಲವು ಯುವತಿಯರು ಆತ್ಮೀಯವಾಗಿ ಕೈ ಕೈಮಿಲಾಯಿಸಿಕೊಂಡು ಜಗಳವಾಡಿದ್ದಾರೆ. ನಡು ರಸ್ತೆಯಲ್ಲಿ ಒಬ್ಬರಿಗೊಬ್ಬರು ಎಳೆದಾಡುವ ಘಟನೆ ನಡೆದಿದೆ.
ಸ್ಥಳೀಯರ ಹೇಳಿಕೆಗಯಂತೆ, ಇದು ವಿಡಿಯೋ ಮಾಡಲು ಆರಂಭವಾದ ಒಂದು ಕಿತ್ತಾಟದಿಂದ ಪ್ರಾರಂಭವಾಯಿತು. ಘಟನೆ ಸಂದರ್ಭದಲ್ಲಿ ಹುಡುಗಿಯರು ಹಿಂದಿಯಲ್ಲಿ ಬೈದಾಡಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ.
ಘಟನೆ ನಂತರ ಸ್ಥಳೀಯರು ಸಮಾಧಾನ ಮಾಡಿಸಿ ಇಬ್ಬರನ್ನು ಕಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯ ಪೊಲೀಸ್ ವಕ್ತಾರ ಈ ಸಂದರ್ಭದಲ್ಲಿ ಯಾರಿಗೂ ಗಾಯವಾಗಿಲ್ಲ. ನಾವು ಘಟನೆಯ ಕುರಿತು ಎಲ್ಲಾ ವಿವರಗಳನ್ನು ದಾಖಲಿಸಿದ್ದೇವೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಫಿಲ್ಮಿ ಸ್ಟೈಲ್‌ನಲ್ಲಿ ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಎಸ್ಕೇಪ್ ಆಗುವಷ್ಟರಲ್ಲಿ ಲಾಕ್ | ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರು ಥಳಿತ



















