ಸ್ಯಾಂಡಲ್‌ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ. ಮಾರ್ಚ್-7 ರಂದು ಮನೆ ಬಳಿ ಅಭಿಮಾನಿಗಳ ಬಂದು ವಿಶ್ ಮಾಡಿದ್ದಾರೆ. ರಾಧಿಕ ಪಂಡಿತ್ ಬೆಳಗ್ಗೆ ತಮ್ಮ ಅಭಿಮಾನಿಗಳಿಗಾಗಿಯೇ ಟೈಮ್ ಮೀಸಲಿಟ್ಟಿದ್ದರು. ಅಭಿಮಾನಿಗಳು ತೋರಿದ ಪ್ರೀತಿಯನ್ನ ಅಷ್ಟೆ ಪ್ರೀತಿಯಿಂದಲೇ ಸ್ವೀಕರಿಸಿದರು. ಅವರು ಕೊಟ್ಟ ಗಿಫ್ಟ್ ಅನ್ನು ಸ್ವೀಕರಿಸಿದರು.
ಆದರೆ, ಯಶ್ ಆ್ಯಂಡ್ ಫ್ರೆಂಡ್ಸ್ ಕೂಡ ಒಂದಷ್ಟು ಫ್ಲಾನ್ ಮಾಡಿದ್ದರು. ರಾಧಿಕಾ ಜನ್ಮ ದಿನಕ್ಕೆ ವಿಶೇಷ ಸೆಲೆಬ್ರೇಷನ್ ಅರೇಂಜ್ ಮಾಡಿದ್ದರು. ಮಕ್ಕಳಾದ ಐರಾ ಮತ್ತು ಯಥರ್ವ ಅಪ್ಪ ಅಮ್ಮನ ಜೊತೆಗೆ ಈ ಒಂದು ಸೆಲೆಬ್ರೇಷನ್ ಅಲ್ಲಿ ಭಾಗಿ ಆಗಿದ್ದರು.
ಈ ಒಂದು ಸೆಲೆಬ್ರೇಷನ್‌ನ ಒಂದಷ್ಟು ಫೋಟೋಗಳು ಇದೀಗ ಶೇರ್ ಆಗಿದ್ದು, ಎಲ್ಲರ ಗಮನ ಕೂಡ ಸೆಳೆಯುತ್ತಿವೆ. ಈ ಫೋಟೋಗಳಲ್ಲಿ ಯಶ್ ಲುಕ್ ಸೋ ಯಂಗ್ ನೋಡಿ. ಹೌದು, ಯಶ್ ಈ ಫೋಟೋಗಳಲ್ಲಿ ಸೂಪರ್ ಯಂಗ್ ಅನಿಸುತ್ತಿದ್ದಾರೆ. ಟಾಕ್ಸಿಕ್ ಚಿತ್ರದ ಟಿಕೆಟ್ ಪಾತ್ರಧಾರಿ ಅನಿಸುತ್ತಾರೆ ನೋಡಿ.
ಈ ಒಂದು ಸೆಲೆಬ್ರೇಷನ್ ಟೈಮ್ ಅಲ್ಲಿ ನೀಲಿ ಬಣ್ಣದ ಜೀನ್ಸ್ ಡ್ರೆಸ್ ತೊಟ್ಟಿದ್ರು. ಇದರಲ್ಲೂ ರಾಧಿಕಾ ಪಂಡಿತ್ ಎಲ್ಲರಿಗೂ ಇಷ್ಟ ಆಗುವ ರೀತಿನೇ ಇದ್ದರು. ಇನ್ನುಳಿದಂತೆ ರಾಧಿಕಾ ಪಂಡಿತ್ ಅಷ್ಟೆ ಖುಷಿಯಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಸಮಯ ಕಳೆದು ಅಂತಲೇ ಹೇಳಬಹುದು.
ಇದನ್ನೂ ಓದಿ : ‘ಲವ್ ಮಾಕ್ಟೇಲ್-3’ ಹೊಸ ಅಧ್ಯಾಯ..!



















