ಹೊಸದೆಹಲಿ : ವಿಯೆಟ್ನಾಂ ಮೂಲದ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ (EV) ತಯಾರಕ ಸಂಸ್ಥೆಯಾದ ವಿನ್‌ಫಾಸ್ಟ್, ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಭರ್ಜರಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕಂಪನಿಯು ತನ್ನ ಸಂಪೂರ್ಣ ವಾಹನ ಪೋರ್ಟ್‌ಫೋಲಿಯೊವನ್ನು ಮೂರು ಪ್ರತ್ಯೇಕ ಬ್ರ್ಯಾಂಡ್ ಲೈನ್‌ಗಳಾಗಿ ಮರುಸಂಘಟಿಸಿದ್ದು, ಇದರೊಂದಿಗೆ ಅಲ್ಟ್ರಾ-ಲಕ್ಷುರಿ ವಿಭಾಗಕ್ಕೆ ಲಗ್ಗೆ ಇಟ್ಟಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಕಂಪನಿಯು ‘ಲ್ಯಾಕ್ ಹಾಂಗ್ 800S’ (Lac Hong 800S) ಮತ್ತು ‘ಲ್ಯಾಕ್ ಹಾಂಗ್ 900S’ (Lac Hong 900S) ಎಂಬ ಎರಡು ಅತ್ಯಾಧುನಿಕ ಐಷಾರಾಮಿ ಫ್ಲ್ಯಾಗ್‌ಶಿಪ್ ಕಾರುಗಳನ್ನು ಜಗತ್ತಿಗೆ ಪರಿಚಯಿಸಿದೆ.
ಮೂರು ಹಂತದ ಹೊಸ ಬ್ರ್ಯಾಂಡ್ ರಚನೆ
ವಿನ್‌ಫಾಸ್ಟ್ ತನ್ನ ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ವಾಹನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ. ಇದು ಕಂಪನಿಯ ಅತ್ಯುನ್ನತ ಮತ್ತು ಅತ್ಯಂತ ಐಷಾರಾಮಿ ವಿಭಾಗವಾಗಿದ್ದು, ಶ್ರೀಮಂತ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಇದರಲ್ಲಿ ಈಗ ಅನಾವರಣಗೊಂಡಿರುವ 800S ಮತ್ತು 900S ಮಾದರಿಗಳು ಸೇರಿವೆ.
ಇದು ಸಾಮಾನ್ಯ ಮಾರುಕಟ್ಟೆಯ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಸರಣಿಯಾಗಿದ್ದು, ಸಣ್ಣ ಕಂಪ್ಯಾಕ್ಟ್ ಕಾರುಗಳಿಂದ ಹಿಡಿದು ಬೃಹತ್ ಎಸ್‌ಯುವಿಗಳವರೆಗೆ (VF 3 ರಿಂದ VF 9) ಲಭ್ಯವಿರಲಿದೆ. ಈ ಬ್ರ್ಯಾಂಡ್ ಅನ್ನು ವಿಶೇಷವಾಗಿ ವಾಣಿಜ್ಯ ಮತ್ತು ಸೇವಾ ವಲಯದ ಸಾರಿಗೆಗಾಗಿ ಮೀಸಲಿಡಲಾಗಿದೆ. ಇದರಲ್ಲಿ ಲಿಮೋ ಗ್ರೀನ್ ಮತ್ತು ಹಿರಿಯೊ ಗ್ರೀನ್‌ನಂತಹ ಮಾದರಿಗಳು ಒಳಗೊಂಡಿವೆ.
ವಿಯೆಟ್ನಾಂ ಸಂಸ್ಕೃತಿಯ ಪ್ರತಿಬಿಂಬ: ಲ್ಯಾಕ್ ಹಾಂಗ್ ವಿನ್ಯಾಸ
ಹೊಸದಾಗಿ ಅನಾವರಣಗೊಂಡಿರುವ ಲ್ಯಾಕ್ ಹಾಂಗ್ 800S ಮತ್ತು 900S ಕಾರುಗಳು ವಿಯೆಟ್ನಾಂನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಕಾರಿನ ಮುಂಭಾಗದ ಗ್ರಿಲ್ ಬಿದಿರಿನ ಕಡ್ಡಿಗಳ ವಿನ್ಯಾಸವನ್ನು ಹೋಲುತ್ತಿದ್ದರೆ, ಲೋಗೋವು ಪೌರಾಣಿಕ ‘ಲ್ಯಾಕ್’ ಹಕ್ಕಿಯ ಸಂಕೇತವನ್ನು ಹೊಂದಿದೆ. ಅಲ್ಲದೆ, ವಿಯೆಟ್ನಾಂನ ಸಾಂಪ್ರದಾಯಿಕ ಕಲೆ ಮತ್ತು ಭತ್ತದ ಗದ್ದೆಗಳ ವಿನ್ಯಾಸವನ್ನು ಕಾರಿನ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸೊಗಸಾಗಿ ಬಳಸಲಾಗಿದೆ. ಈ ಕಾರುಗಳ ಹೆಸರಿನ ಫಲಕಕ್ಕೆ ಚಿನ್ನದ ಲೇಪನ ಮಾಡಲಾಗಿದ್ದು, ಇದು ಅಪ್ಪಟ ಐಷಾರಾಮಿ ಸ್ಪರ್ಶ ನೀಡಿದೆ.
ರಾಜಾತಿಥ್ಯ ನೀಡುವ ಒಳಾಂಗಣ ಮತ್ತು ತಂತ್ರಜ್ಞಾನ
ಈ ಕಾರುಗಳ ಒಳಾಂಗಣವು ಯಾವುದೇ ಪಂಚತಾರಾ ಹೋಟೆಲ್‌ಗಿಂತ ಕಡಿಮೆಯಿಲ್ಲ. ನಾಪಾ ಲೆದರ್ ಸೀಟುಗಳು, ಅಪರೂಪದ ಮರದ ಅಲಂಕಾರ ಮತ್ತು ಚಿನ್ನದ ಲೇಪಿತ ಡೀಟೇಲಿಂಗ್‌ಗಳು ಕಾರಿನ ಘನತೆಯನ್ನು ಹೆಚ್ಚಿಸಿವೆ. ವಿಶೇಷವಾಗಿ 900S ಮಾದರಿಯಲ್ಲಿ ಹಿಂಬದಿಯ ಪ್ರಯಾಣಿಕರಿಗೆ ಸಂಪೂರ್ಣ ಗೌಪ್ಯತೆ ನೀಡಲು ಪ್ರತ್ಯೇಕ ಪಾರ್ಟಿಷನ್, ಸ್ಟಾರ್‌ಲೈಟ್ ಹೆಡ್‌ಲೈನರ್ ಮತ್ತು ದೊಡ್ಡ ಮನರಂಜನಾ ಪರದೆಯನ್ನು ನೀಡಲಾಗಿದೆ. ಇದು ಪ್ರಮುಖವಾಗಿ ಚಾಲಕನ ನೆರವು ಪಡೆದು ಪ್ರಯಾಣಿಸುವ (Chauffeur-driven) ಗಣ್ಯರಿಗಾಗಿ ವಿನ್ಯಾಸಗೊಳಿಸಲಾದ ಕಾರಾಗಿದೆ.
ಅಪ್ರತಿಮ ವೇಗ ಮತ್ತು ಸಾಮರ್ಥ್ಯ
ತಾಂತ್ರಿಕವಾಗಿ ಈ ಕಾರುಗಳು ಅತ್ಯಂತ ಶಕ್ತಿಶಾಲಿಯಾಗಿವೆ. ಇದರಲ್ಲಿ ಮೂರು ಮೋಟಾರ್‌ಗಳ (Tri-motor) ವ್ಯವಸ್ಥೆಯಿದ್ದು, ಇದು ಬರೋಬ್ಬರಿ 625bhp (460kW) ಶಕ್ತಿಯನ್ನು ಉತ್ಪಾದಿಸುತ್ತದೆ. ಸುಗಮ ಪ್ರಯಾಣಕ್ಕಾಗಿ ಕಂಪನಿಯು ಹೊಸ ‘ಫುಲಿ ಆಕ್ಟಿವ್ ಸಸ್ಪೆನ್ಷನ್’ ವ್ಯವಸ್ಥೆಯನ್ನು ಅಳವಡಿಸಿದೆ. ಈ ಐಷಾರಾಮಿ ಕಾರುಗಳ ಉತ್ಪಾದನೆಯು 2027 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. 2025 ರಲ್ಲಿ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಸುಮಾರು 1.75 ಲಕ್ಷ ವಾಹನಗಳನ್ನು ವಿತರಿಸಿ ಅಗ್ರಸ್ಥಾನ ಕಾಯ್ದುಕೊಂಡಿರುವ ವಿನ್‌ಫಾಸ್ಟ್, ಈಗ ಜಾಗತಿಕ ಮಟ್ಟದಲ್ಲಿ ರೊಲ್ಸ್ ರಾಯ್ಸ್ ಮತ್ತು ಬೆಂಟ್ಲಿಯಂತಹ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಇದನ್ನೂ ಓದಿ : ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ



















