ಬೆಂಗಳೂರು | ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದ್ದು, ಸಿಸಿಬಿ ನಾರ್ಕೊಟಿಕ್ಸ್ ವಿಭಾಗದಿಂದ ನಡೆದ ಈ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅಶ್ವಿನ್ (27), ಯುವತಿ ಮುಬಿನಾ (25) ಎಂಬ ಇಬ್ಬರನ್ನು ಬಂಧಿಸಲಾಗಿದೆ.
ಬಾಗಲೂರಿನ ಪ್ರೆಸ್ಟಿಜ್ ಫೈನ್‌ಬೇರಿ ಪಾರ್ಕ್‌ನ ಪ್ಲಾಟ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಬರೋಬ್ಬರಿ 10 ಕೋಟಿ ರೂ. ಮೌಲ್ಯದ LSD, ಹೈಡ್ರೋ ಗಾಂಜಾ, ಚರಸ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರು ಆರೋಪಿಗಳು ಪೆಡ್ಲಿಂಗ್‌ನ್ನೇ ವೃತ್ತಿ ಮಾಡಿಕೊಂಡಿದ್ದರು. ಮಾಹಿತಿಗಳ ಪ್ರಕಾರ ಡ್ರಗ್ಸ್‌ನ್ನು ಥೈಲ್ಯಾಂಡ್‌ನಿಂದ ವಿನ್ಸೆಂಟ್ ಎಂಬಾತ ಕಳಿಸಿಕೊಡ್ತಿದ್ದ. ಫ್ಲೈಟ್‌ನಲ್ಲಿ ಆಗಾಗ ಸ್ವಲ್ಪ ಸ್ವಲ್ಪ ಡ್ರಗ್ಸ್ ಕಳಿಸ್ತಿದ್ದ ವಿನ್ಸೆಂಟ್, ಆತ ಸೂಚಿಸಿದ ಜಾಗದಲ್ಲಿ ಅಶ್ವಿನ್ ಹಾಗೂ ಮುಬಿನಾ ಡ್ರಗ್ಸ್ ಇಡುತ್ತಿದ್ದರು.
ಮೊದಲ ಬಾರಿಗೆ ಕರ್ನಾಟಕದಲ್ಲಿ 8,335 LSD ಸ್ಟ್ರಿಪ್ಸ್ ಸೀಜ್ ಮಾಡಲಾಗಿದೆ. 1 LSD ಸ್ಟ್ರಿಪ್ಸ್ 6 ಸಾವಿರ ರೂ. ಬೆಲೆಬಾಳುತ್ತೆ. ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್ಟ್ ಮಾರಾಟ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ 534 ಗ್ರಾಂ ಚರಸ್, 5 ಕೆಜಿ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಫ್ಲಾಟ್ ಮಾಲೀಕನ ಪಾತ್ರದ ಬಗ್ಗೆ ಸಿಸಿಬಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಸ್ಟಾರ್ ಸ್ಪೋರ್ಟ್ಸ್‌ನ ‘ಕಪ್‌ಕೇಕ್’ ಜಾಹೀರಾತಿಗೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ ಕೋಚ್



















