ಬೆಂಗಳೂರು : ನಿರ್ದೇಶಕ ಅನೀಶ್ ಅವರನ್ನ ಕಿಡ್ನ್ಯಾಪ್ ಮಾಡಿ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಓರ್ವ ಸಿನಿಮಾ ನಟಿ ಸೇರಿ 11 ಜನ ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ದೇಶಕ ಅನೀಶ್ ಅವರ ಕಿಡ್ನ್ಯಾಪ್ ನಡೆದಿತ್ತು. ಕೆಲ ಶಾರ್ಟ್ ಫಿಲ್ಮ್ ಮಾಡಿದ್ದ ನಿರ್ದೇಶಕ ಅನೀಶ್ ಇತ್ತೀಚೆಗೆ ʻಜೀವನದ ಭಾಷೆʼ ಎನ್ನುವ ಹೊಸ ಸಿನಿಮಾವೊಂದನ್ನ ಶುರು ಮಾಡಿದ್ದರು. ಕಾರಣಾಂತರಗಳಿಂದ ಸಿನಿಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದರು. ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದ ನಿರ್ದೇಶಕ, ನಟಿ ಐಶ್ವರ್ಯಾಗೆ (ಭೀಮಾ ಸಿನಿಮಾದಲ್ಲಿ ನಟಿಸಿರು ನಟಿ) ತನ್ನ ಕಾರು ಮಾರಾಟದ ಬಗ್ಗೆ ವಿಚಾರ ತಿಳಿಸಿದ್ದರು.
ನಟಿಯ ಮೂಲಕ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು, ಕಾರು ಖರೀದಿ ಮಾಡೋದಾಗಿ ಹೇಳಿದ್ದರು. ಅದಕ್ಕಾಗಿ ನಟಿಯ ಮೂಲಕ ನಿರ್ದೇಶಕನನ್ನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿನ ಪ್ರದೇಶವೊಂದಕ್ಕೆ ಕರೆಸಿಕೊಂಡು ಕಿಡ್ನ್ಯಾಪ್ ಮಾಡಿದ್ದರು. ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ ಬಳಿಕ ನಿರ್ದೇಶಕನನ್ನ ಬ್ಯಾರಹಳ್ಳಿ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್, ಹಾಕಿ ಸ್ಟಿಕ್‌ನಿಂದಲೂ ಹಲ್ಲೆ ನಡೆಸಿದ್ದರು. ಬಳಿಕ ಆತನ ಬಳಿಯಿದ್ದ ಚಿನ್ನಾಭರಣ ದೋಚಿಕೊಂಡು, ತುಮಕೂರಿನ ಮಧುಗಿರಿ ಬಳಿ ಬಿಟ್ಟಿದ್ದರು. ಈ ಸಂಬಂಧ ನಿರ್ದೇಶಕ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಠಾಣೆಯ ಪೊಲೀಸರು, 11 ಜನರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ : ದುರಾಡಳಿತವೇ ಹೆಚ್ಚಾಗಿದೆ.. ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು | ಹೆಚ್‌ಡಿಕೆ ಗುಡುಗು



















