ಉಡುಪಿ | ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಕುರಿತು ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ್ತಿಯಾದ ರಮಿತಾ ಸೂರ್ಯವಂಶಿ ಇವರು ಬಿಂದು ಸಿರ ಎನ್ನುವ ಫೇಸ್‍ಬುಕ್ ಖಾತೆ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಸಿದ್ದಾರೆ.

ದೂರಿನಲ್ಲಿ ಏನಿದೆ?
“ಬಿಂದು ಸಿರ ಎಂಬ ಮಹಿಳೆ ಕರ್ನಾಟಕ ಕಾಂಗ್ರೆಸ್‌ನ ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದು, ತನ್ನ ಸಾಮಾಜಿಕ ಜಾಲತಾಣದಲ್ಲಿ ಭಾರತ ದೇಶದ ಪ್ರಧಾನಿಗೆ ಅವಮಾನವಾಗುವ ಪೋಸ್ಟ್ ಅನ್ನು ಹರಿಬಿಟ್ಟಿದ್ದಾರೆ. ಭಾರತದ ಪ್ರಜೆಯಾಗಿ ದೇಶದ ಪ್ರಧಾನಿಗೆ ಗೌರವ ಕೊಡುವಂಥದ್ದು ಭಾರತೀಯರ ಕರ್ತವ್ಯ, ಹಾಗಾಗಿ ಬಿಂದು ಸಿರ ಅವರ ಪೋಸ್ಟ್ ತೀವ್ರ ಚರ್ಚೆಗೆ ಆಸ್ಪದವಾಗಿದ್ದು, ಪ್ರಧಾನಿಗೆ ಅವಮಾನ ಮಾಡಿದ ಇವರ ಮೇಲೆ ಕ್ರಮ ತೆಗೆದು ಕೊಳ್ಳಬೇಕಾಗಿ ವಿನಂತಿ” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಸಿಕೊಂಡಿರುವ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರೆ.

ಇದನ್ನೂ ಓದಿ : ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ | ಮನೆಗಳಿಗೆ ಕನ್ನ ಹಾಕುತ್ತಿದ್ದ ಕಿಲಾಡಿ ಕಳ್ಳರು ಅಂದರ್



















