ಹಾಸನ: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಜೀತ ಪದ್ಧತಿ ಪ್ರಕರಣವೊಂದು ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಳೇಬೀಡು ಹೋಬಳಿ, ಚಟ್ನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ.
ದಿನಗೂಲಿ ನೀಡದೆ ಒತ್ತಾಯವಾಗಿ ಕೆಲಸ ಮಾಡಿಸಿ, ಅಮಾಯಕರನ್ನು ಕೂಡಿ ಹಾಕಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಹದಿನೆಂಟಕ್ಕೂ ಹೆಚ್ಚು ಬಂಧಿತ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ.
ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದಿದ್ದ ನಿರ್ಗತಿಕರನ್ನು ಕೆಲಸ ಕೊಡುವುದಾಗಿ ಕರೆದು, ಒತ್ತಾಯದ ದುಡಿಮೆ ಮಾಡಿಸುತ್ತಿದ್ದ ಎಂದು ನಾಗರಾಜ್ ಎಂಬ ವ್ಯಕ್ತಿ ವಿರುದ್ಧ ಆರೋಪ ಕೇಳಿ ಬಂಧಿದೆ. ಎಲ್ಲ ಕಾರ್ಮಿಕರನ್ನು ಒಂದೆಡೆ ಕೂಡಿ ಹಾಕಿದ್ದ ನಾಗರಾಜ್, ಮುನೇಶ್, ಮಂಜು ಶುಂಠಿ ಕೆಲಸಕ್ಕೆ ಕರೆದೊಯ್ದು, ಕೆಲಸ ಮುಗಿದ ನಂತರ ಅದೇ ಜಾಗದಲ್ಲಿ ಕೂಡಿ ಹಾಕುತ್ತಿದ್ದರು ಎನ್ನಲಾಗುತ್ತಿದೆ.
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಬಂಧಿತ ಕಾರ್ಮಿಕರಿಗೆ ಆಶ್ರಯ ಪೊಲೀಸರು ನೀಡಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿ ನಾಗರಾಜ್ ಮತ್ತು ಇತರರು ಎಸ್ಕೇಪ್ ಆಗಿದ್ದಾರೆ. ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಅಪರಿಚಿತನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ | ಮೂರು ಎಕರೆ ಜಾಗಕ್ಕಾಗಿ ಭಾವನನ್ನೇ ಹತ್ಯೆಗೈದ ಬಾಮೈದ



















