ದೇವನಹಳ್ಳಿ : ಚರಂಡಿಯಲ್ಲಿ ಕತ್ತು ಕೊಯ್ದು ಸುಟ್ಟು ಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ (40) ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಸ್ವರ್ಣಾರ್ಧಿ ಹೋಟೆಲ್ ಬಳಿ ನಡೆದಿದೆ.
ಹಂತಕರು ಬೇರೆಡೆ ಕೊಂದು ರಾತ್ರಿ ವೇಳೆ ಶವ ತಂದು ಬಿಸಾಕಿದ್ದು, ನಾಲ್ಕೈದು ದಿನಗಳ ಹಿಂದೆ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆ ಮೂತ್ರ ವಿಸರ್ಜನೆಗೆ ಹೋಗಿದ್ದ ವ್ಯಕ್ತಿಯ ಕಣ್ಣಿಗೆ ಶವ ಕಾಣಿಸಿದೆ. ಕೂಡಲೇ ಆತ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಕೋ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಸದ್ಯ ಮೃತದೇಹವನ್ನು ದೇವನಹಳ್ಳಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಮಾಜಿ ಪ್ರೇಯಸಿಯ ಮದುವೆಗೆ ಬಂದು ಹೊಟ್ಟೆಗೆ ಗುಂಡು ಹಾರಿಸಿದ ಪ್ರಿಯಕರ | ವಿಡಿಯೋ ವೈರಲ್


















