ರಾಮನಗರ : ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಸುಮಾರು ಅರ್ಧ ಕೆ.ಜಿ ಚಿನ್ನಾಭರಣ ದರೋಡೆ ಮಾಡಿ, ಖದೀಮರು ಪರಾರಿಯಾಗಿರುವ ಘಟನೆ ರಾಮನಗರ ಟೌನ್ ವ್ಯಾಪ್ತಿಯ ದ್ಯಾವರಸೇಗೌಡನದೊಡ್ಡಿ ಬಳಿ ನಡೆದಿದೆ.
ಸಾಫ್ಟ್ವೇರ್ ಉದ್ಯೋಗಿ ಲಿಖಿತ್ ಎಂಬುವವರಿಗೆ ಮನೆ ಸೇರಿದ್ದಾಗಿದ್ದು, ಸಂಜೆ ಮನೆಗೆ ಬಂದ ಲಿಖಿತ್ ಬೀಗ ಮುರಿದಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಬಳಿಕ ಬೆಡ್ ರೂಂನ ಕಬೋರ್ಡ್ ಅನ್ನು ನೋಡಿದ್ದಾಗ ಚಿನ್ನಾಭರಣ ಕಳ್ಳತನ ಆಗಿರುವುದು ಗೊತ್ತಾಗಿದೆ.
ಇನ್ನು ಖದೀಮರು ಕಳ್ಳತನ ಮಾಡಿ, ಸಿಸಿಟಿವಿ ಡಿವಿಆರ್ ಕೂಡ ಹೊತ್ತುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಖದೀಮರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಅಕ್ಕಪಕ್ಕದ ಮನೆ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ‘ಗಾಂಧಿ ಪಾಕಿಸ್ತಾನಕ್ಕೆ ರಾಷ್ಟ್ರಪಿತ’ ಎಂದ ಶಾಸಕ ಯತ್ನಾಳ್ ವಿರುದ್ಧ ಪ್ರಕರಣ ದಾಖಲು!



















