ಹಾಸನ : ಮಹಿಳೆಗೆ ಸಾರಿಗೆ ಬಸ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆ, ಸಾರಿಗೆ ಬಸ್ ಅಡ್ಡಗಟ್ಟಿ ಬಸ್ ಚಾಲಕನಿಗೆ ಮನಬಂದಂತೆ ಮಹಿಳೆಯ ಪತಿ ಥಳಿಸಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ಗ್ರಾಮದಲ್ಲಿ ನಡೆದಿದೆ.
ಹಾಸನದಿಂದ ಅರಸೀಕೆರೆಗೆ ತೆರಳುತ್ತಿದ್ದ ಸಾರಿಗೆ ಬಸ್ ರಶ್ ಆಗಿದ್ದರು ದುದ್ದ ಗ್ರಾಮದಲ್ಲಿ ಸಾರಿಗೆ ಬಸ್ ಹತ್ತಿ ಮೆಟ್ಟಿಲು ಮೇಲೆ ಮಹಿಳೆ ನಿಂತಿದ್ದಾಳೆ. ಬಸ್ ಸಂಪೂರ್ಣ ಭರ್ತಿಯಾಗಿದ್ದರಿಂದ ಡೋರ್ ಹಾಕಲು ಸಾಧ್ಯವಾಗದೆ ಪ್ರಯಾಣಿಕರ ಮಧ್ಯೆ ಸಿಲುಕಿ ನಿರ್ವಾಹಕ ಪರದಾಡುತ್ತಿದ್ದ. ಈ ವೇಳೆ ಡ್ರೈವರ್ ಸೀಟ್‌ನಿಂದ ಇಳಿದು ಬಂದ ಚಾಲಕ ಮಹಿಳೆಯನ್ನು ತಳ್ಳಿ ಬಸ್ ಬಾಗಿಲು ಹಾಕಿದ್ದಾನೆ. ಈ ವೇಳೆ ಮಹಿಳೆ ಹಾಗೂ ಚಾಲಕ, ನಿರ್ವಾಹಕನ ನಡುವೆ ವಾಗ್ವಾದ ನಡೆದಿದೆ.
ಬಳಿಕ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತಿಗೆ ಕರೆ ಮಾಡಿ ಹೇಳಿದ್ದಾಳೆ. ಬಾಗೇಶಪುರದಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದು, ಪತ್ನಿ ಬರುತ್ತಿದ್ದ ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯ ಪತಿ, ಬಸ್ ಬರುತ್ತಲೇ ಅಡ್ಡಗಟ್ಟಿ ಡ್ರೈವರ್‌ಗೆ ಹಿಗ್ಗಾಮುಗ್ಗಾ ಥಳಿಸಿ, ಬಸ್‌ನ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಈ ಘಟನೆಯಿಂ ಕೆಲಕಾಲ ಬಸ್ ಬಾಗೇಶಪುರದಲ್ಲಿ ನಿಂತಿದ್ದು, ಹಲ್ಲೆಗೊಳಗಾದ ಚಾಲಕ ಅರಸೀಕೆರೆ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!



















