ಚಿಕ್ಕಮಗಳೂರು : ಕಾಡಾನೆ ಓಡಿಸಲು ಹೋಗಿದ್ದ ಜ್ಯೂ. ಅರ್ಜುನ್ ಬೆಚ್ಚಿಬಿದ್ದು ದಿಕ್ಕು ತಪ್ಪಿ ಕಾಡು ಸೇರಿದ್ದು, ಕೊನೆಗೂ ಪತ್ತೆ ಹಚ್ಚುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ಸು ಕಂಡಿದ್ದಾರೆ.
ತಾಲೂಕಿನ (Chikkamagaluru) ಪುರ ಗ್ರಾಮಕ್ಕೆ ಕಾಡಾನೆ (Elephant) ಓಡಿಸೋಕೆ ಅಂತಾ ಜ್ಯೂ. ಅರ್ಜುನ ಆಗಮಿಸಿದ್ದ. ಆದರೆ, ಭಯಬಿದ್ದು ತಾನೇ ಕಾಡಿನ ಪಾಲಾಗಿದ್ದಾನೆ. ಮದವೇರಿದ ಕಾಡಾನೆ ಜೊತೆ ಕಾದಾಟದಲ್ಲಿ ಜ್ಯೂನಿಯರ್ ಅರ್ಜುನ ಹೆದರಿ ಕಾಡು ಸೇರಿದ್ದ. ಆನಂತರ ಅಧಿಕಾರಿಗಳು ಹುಡುಕಾಟ ನಡೆಸಿ ಕಾಡಾನೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದ್ದಾರೆ.
ಫೆ.16ರಂದು ಓರ್ವ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ಆ ಕಾಡಾನೆ ಸೆರೆಗೆ ಸರ್ಕಾರ ಆದೇಶಿಸಿದೆ. ಗುಂಪಿನಲ್ಲಿ ಮೂರು ಕಾಡಾನೆಗಳಿದ್ದು ಅದರಲ್ಲಿ ಒಂದು ಕಾಡಾನೆಯನ್ನ ಸೆರೆ ಹಿಡಿದು, ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸೂಚನೆ ನೀಡಲಾಗಿದೆ
ಇದನ್ನೂ ಓದಿ : ರಣಜಿ ಟ್ರೋಫಿ ಫೈನಲ್ | ಚಿನ್ನಸ್ವಾಮಿಯಲ್ಲಿ ಕಾಮಗಾರಿ.. ಪಂದ್ಯ ಹುಬ್ಬಳ್ಳಿಗೆ ಸ್ಥಳಾಂತರ!



















