ರಾಮನಗರ : ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಬಳಿ ನಡೆದಿದೆ.

ವಾಹನ ಸಾಗಿಸುತ್ತಿದ್ದ ಗೂಡ್ಸ್ ರೈಲಿನ 1 ಬೋಗಿ ಹಳಿ ತಪ್ಪಿದ್ದು, ಕೆಲ ಕಿಲೋ ಮೀಟರ್‌ವರೆಗೂ ಹಳಿ ಬಿಟ್ಟು ರೈಲು ಚಲಿಸಿದೆ. ಬಿಡದಿ ರೈಲ್ವೆ ನಿಲ್ದಾಣ ದಾಟಿದ ಬಳಿಕ ಘಟನೆ ನಡೆದಿದ್ದು, ಬೆಂಗಳೂರು-ಮೈಸೂರು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಜಿಲ್ಲಾ ಗೃಹ ರಕ್ಷಕ ದಳದಲ್ಲಿ 89 ಹುದ್ದೆಗಳ ನೇಮಕಾತಿ | SSLC ಪಾಸಾಗಿದ್ದರೂ ಸಾಕು



















