ಬೆಂಗಳೂರು | ದ್ವಿತೀಯ ಪಿಯುಸಿ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯುತ್ತೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 18 ಮಾರ್ಚ್‌ನಿಂದ ಏಪ್ರಿಲ್ 2ರವೆಗೆ ನಡೆಯುತ್ತೆ 2024ರಿಂದ ವೆಬ್ ಕಾಸ್ಟಿಂಗ್ ಶುರುಮಾಡುದ್ವಿ ಈ ಬಾರಿಯೂ ಕೂಡ ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ ವೆಬ್ ಕಾಸ್ಟಿಂಗ್ ಇರುತ್ತೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಸಚಿವ ಮಧುಬಂಗಾರಪ್ಪ, ಇಂದು ಬೆಳ್ಳಗೆ ಪೊಲೀಸ್ ಇಲಾಖೆ, ಇಂಟಲಿಜೆನ್ಸ್ ಸೇರಿ ಹಿರಿಯ ಅಧಿಕಾರಿಗಳ ಜೊತೆ ಸಭೆ ಆಯ್ತು. ಡಿಸಿ, ಬಿಇಓ, ಡಿಡಿಪಿಐ ಜೊತೆ ಕೂಡ ಚರ್ಚೆ ಆಗಿದೆ. ಕಳೆದ ಬಾರಿಗಿಂತ ಹೆಚ್ಚುವರಿಯಾಗಿ ಪ್ರಿಪರೇಷನ್ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ನೀರು ಸೇರಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಮಕ್ಕಳಿಗೆ ಪ್ರಯಾಣ ಮಾಡಲು ಯಾವುದೇ ರೀತಿ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಸಿಗ್ತಾ ಇದೆ. ಹೀಗಾಗಿ ಅದರ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ತಪ್ಪು ಮಾಹಿತಿ ನೀಡುವವರ ವಿರುದ್ದ ಕಠಿಣ ಕ್ರಮ ವಹಿಸಲು ಸೂಚಿಸಲಾಗಿದೆ. ಪರೀಕ್ಷಾ ಕಾಯ್ದೆಯಡಿ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಒಟ್ಟೂ 7,10,363ವಿಧ್ಯಾರ್ಥಿಗಳು ನೋಂದಣಿ. SSLC ಪರೀಕ್ಷೆಗೆ 9,02,889 ವಿದ್ಯಾರ್ಥಿಗಳ ನೋಂದಣಿ ಒಟ್ಟು 1217ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಒಟ್ಟು 2871ಕೇಂದ್ರದಲ್ಲಿ SSLC ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ.
ಮಾಡೆಲ್ ಪ್ರಶ್ನೆಪತ್ರಿಕೆಯನ್ನ ಮಕ್ಕಳಿಗೆ ನೀಡಲಾಗಿದೆ. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮವಹಿಸಿದ್ದೇವೆ. ನಾವು ಪರೀಕ್ಷೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
Satsನಲ್ಲಿ ಕೆಲ ಖಾಸಗಿ ಶಾಲೆಯವರು ನೊಂದಣಿ ಮಾಡಿಕೊಳ್ಳಿಲ್ಲ. ಸದ್ಯ ಈಗ 9,02,889 ಮಕ್ಕಳೇ ಫೈನಲ್ ಆಗಿ ನೊಂದಣಿ ಮಾಡಿಕೊಂಡಿರೋದು ಇದಕ್ಕೆ ಕಡಿವಾಣ ಹಾಕಲು ಇದೀಗಾ ಫೇಷಿಯಲ್ ಅಟೆಂಡೆನ್ಸ್ ಕಡ್ಡಾಯ ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದ ಫೆಷಿಯಲ್ ಅಟೆಂಡೆನ್ಸ್ ಕಡ್ಡಾಯವಾಗಿದೆ ಆಗ ಮಕ್ಕಳ ಸರಿಯಾದ ಹಾಜರಾತಿ ಸಿಗುತ್ತೆ ಎಂದು ಹೇಳಿದ್ದಾರೆ.
ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ
ಫೆಬ್ರವರಿ 28- ಕನ್ನಡ, ಅರೇಬಿಕ್
ಮಾರ್ಚ್ 2- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3- ಇಂಗ್ಲಿಷ್
ಮಾರ್ಚ್ 4- ತಮಿಳು,ತೆಲುಗು,ಮಲಯಾಳಂ, ಮರಾಠಿ,ಉರ್ದು,ಸಂಸ್ಕೃತ ಫ್ರೆಂಚ್.
ಮಾರ್ಚ್ 5- ಇತಿಹಾಸ
ಮಾರ್ಚ್ 6- ಭೌತಶಾಸ್ತ್ರ
ಮಾರ್ಚ್ 7- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ,ಭೂಗರ್ಭ ಶಾಸ್ತ್ರ.
ಮಾರ್ಚ್ 9- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10- ಅರ್ಥಶಾಸ್ತ್ರ
ಮಾರ್ಚ್ 11- ತರ್ಕಶಾಸ್ತ್ರ,ವಿದ್ಯುನ್ಮಾನಶಾಸ್ತ್ರ,ಗೃಹ ವಿಜ್ಞಾನ
ಮಾರ್ಚ್ 12- ಹಿಂದಿ
ಮಾರ್ಚ್ 13- ರಾಜ್ಯಶಾಸ್ತ್ರ
ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16- ಸಮಾಜಶಾಸ್ತ್ರ,ಜೀವಶಾಸ್ತ್ರ,ಗಣಕ ವಿಜ್ಞಾನ.
ಮಾರ್ಚ್ 17- ಹಿಂದುಸ್ತಾನಿ,ಸಂಗೀತ,ರೀಟೇಲ್ ಆಟೋಮೊಬೈಲ್,ಆರೋಗ್ಯ ರಕ್ಷಣೆ
SSLC ಪರೀಕ್ಷೆ 1 ವೇಳಾಪಟ್ಟಿ
ಮಾರ್ಚ್ 18- ಪ್ರಥಮ ಭಾಷೆ.
ಮಾರ್ಚ್ 23- ವಿಜ್ಞಾನ
ಮಾರ್ಚ್ 25- ದ್ವೀತಿಯ ಭಾಷೆ
ಮಾರ್ಚ್ 28- ಗಣಿತ
ಮಾರ್ಚ್ 30- ತೃತೀಯ ಭಾಷೆ
ಏಪ್ರಿಲ್ 2- ಸಮಾಜ ವಿಜ್ಞಾನ.
SSLC ಪರೀಕ್ಷೆ 2 ವೇಳಾಪಟ್ಟಿ
ಮೇ 18- ಪ್ರಥಮ ಭಾಷೆ.
ಮೇ 19- ವಿಜ್ಞಾನ
ಮೇ 20- ದ್ವೀತಿಯ ಭಾಷೆ
ಮೇ 21- ಗಣಿತ
ಮೇ 22- ತೃತೀಯ ಭಾಷೆ
ಮೇ 23- ಸಮಾಜ ವಿಜ್ಞಾನ
Puc ಪರೀಕ್ಷೆ-2 ಏಪ್ರಿಲ್ 25 ರಿಂದ ಆರಂಭ
SSLC ಪರೀಕ್ಷೆ- 2 ಮೇ- 18 ರಿಂದ ಆರಂಭ
ಮಕ್ಕಳಿಗೆ ಪರೀಕ್ಷೆಯ ಸಲುವಾಗಿ ಸಹಾಯವಾಣಿ ಬಿಡುಗಡೆ
080- 23310075
080- 23310076
ಇದನ್ನೂ ಓದಿ : ಇಂದಿನಿಂದ ಬೆಳ್ಳಳ್ಳಿಯಲ್ಲಿ ಕಸ ವಿಲೇವಾರಿ ಸ್ಥಗಿತ | ವಿಲೇಜ್ ಅಭಿವೃದ್ಧಿ ಹಣ ಬಿಡುಗಡೆಗೆ ಸ್ಥಳೀಯರ ಆಗ್ರಹ



















