ಬೆಂಗಳೂರು : ರಾಜ್ಯ ಸರ್ಕಾರ ಬಡವರಿಗೆ ಮನೆ ಭೂಮಿ ಕೊಡದೆ ಸರ್ಕಾರವೇ ಭೂಮಿ ಕಬಳಿಸುತ್ತಿದೆ. ತುಮಕೂರು, ಚಾಮರಾಜನಾಗರ, ಉಡುಪಿ, ದ.ಕನ್ನಡ ಸೇರಿದಂತೆ ಎಲ್ಲ ಕಡೆ ಪಾರ್ಟಿ ಕಚೇರಿಗೆ ಸಿಎ ಸೈಟ್ ಪಡೆದಿದ್ದಾರೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ಕೇವಲ 22 ಲಕ್ಷ ರೂ.ಗೆ ಚಿಕ್ಕಬಳ್ಳಾಪುರದಲ್ಲಿ ಸಿಎ ಸೈಟ್ ಪಡೆದಿದ್ದಾರೆ. ಬಾದಾಮಿಯಲ್ಲಿ ಕೇವಲ 1 ಲಕ್ಷ 22 ಸಾವಿರ ರೂ. ಬಾದಾಮಿ, ಚನ್ನರಾಯ್ ಪಟ್ಟಣದಲ್ಲೂ ಪಡೆದಿದ್ದಾರೆ. ಅವರದೇ ಪೆನ್ನು, ಅವರದೇ ಒಪ್ಪಿಗೆ, ಅವರದೆ ಸಹಿ ಅಷ್ಟೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಬೆಲೆಬಾಳುವ ಸೈಟ್ ಪಡೆದಿದ್ದಾರೆ ಎಂದಿದ್ದಾರೆ.
ಎಸ್ ಆರ್ ವ್ಯಾಲ್ಯುನ ಕೇವಲ 5% ಮಾತ್ರ ನೀಡಿ ಸಿಎ ಸೈಟ್ ಕಬಳಿಕೆ ಕಾಂಗ್ರೆಸ್ ಪಕ್ಷದ ಕಚೇರಿಗಾಗಿ ಸಿಎ ಸೈಟ್ ಪಡೆಯಲು ನಿಯಮದಲ್ಲಿ ಅವಕಾಶವಿಲ್ಲ. ಅಧಿಕಾರಿಗಳು, ಸೈಟ್ ನೀಡಲು ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಆದರೂ ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಹಿರಿಯರಾದ ಮಹಾದೇವಪ್ಪ ಶಾಸಕರನ್ನ ಬೀದಿ ನಾಯಿಗಳಿಗೆ ಹೊಲಿಸಿರುವುದು ಸರಿಯಲ್ಲ | ಬಸವರಾಜ್ ಶಿವಗಂಗಾ



















