ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಹೊರಗಿನವರಿಗೆ ನಿಯತ್ತು ಇರಲ್ವ ಎಂದು ನಾನು ಹೇಳಲಿಲ್ಲ, ನಾನು ಹೇಳಿದ್ದು ಇಷ್ಟೇ.. ನಾಯಿಗಳನ್ನ ಯಾರಿಗೆ ಹೋಲಿಸಿದ್ದಾರೆ ಗೊತ್ತಿಲ್ಲ, ಕಾಂಗ್ರೆಸಿಗರು ನಿಯತ್ತಿನ ನಾಯಿಗಳು, ನಾಯಿಗಳು ಯಜಮಾನನ ಋಣ ತೀರಿಸುತ್ತೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ
ವರದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ನಾಯಿಯ ಸ್ವಭಾವವೇ ಹಾಗೇ ಬೀದಿ ನಾಯಿಯನ್ನೂ ಸಾಕ್ತಾರೆ, ಮನೆಯಲೂ ಸಾಕ್ತಾರೆ. ಎಲ್ಲರೂ ಕೂಡ ಸಾಕ್ತಾರೆ ಯಾತಕ್ಕೆ ಸಾಕ್ತಾರೆ ನಿಯತ್ತಿಗೆ ಸಾಕ್ತಾರೆ. ಬೇರೆಯವರ ಋಣ ತೀರಿಸ್ತಾರೆ ಅಂತಾಲ್ಲ. ಆ ವಿಶ್ವಾಸ ಕಾಪಾಡುತ್ತೆ ಅಂತಾ ಅಷ್ಟೇ ಎಂದಿದ್ದಾರೆ.
ಬೀದಿ ನಾಯಿಗೂ ಹೋಗಿ ಊಟ ಹಾಕ್ತಾರೆ. ಯಾಕೆ ಅಂದ್ರೆ ಅದು ನಮ್ಮನ್ನ ಕಾಪಾಡುತ್ತೆ ಅಂತಾ ನಾಯಿಗೆ ನಿಯತ್ತಿದೆ ಅಂತಾನೇ ನಾನ್ನುಡಿಯೇ ಇದೆ. ನಾಯಿಗಿರೋ ನಿಯತ್ತು ನಿನ್ನಗಿಲ್ಲ ಅಂತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆ ಕುರ್ಚಿಯಲ್ಲಿ ಕೂರಲು ನೀವು ಅರ್ಹರಲ್ಲ | ರಾಹುಲ್ ಗಾಂಧಿ ವಿರುದ್ಧ ನವಜೋತ್ ಕೌರ್ ಸಿಧು ತೀವ್ರ ವಾಗ್ದಾಳಿ!



















