ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಆಯಿಲ್ ಇಂಡಿಯಾದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರದ ಕಂಪನಿಯಲ್ಲಿ 3 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Oil India recruitment 2026) ಹೊರಡಿಸಲಾಗಿದೆ. ಕಾಂಟ್ರ್ಯಾಕ್ಚುವಲ್ ಎಲೆಕ್ಟ್ರಿಶಿಯನ್ ಹಾಗೂ ಅಸೋಸಿಯೇಟ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯುತ್ತಿದೆ.
ಹುದ್ದೆಗಳ ಕುರಿತು ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಆಯಿಲ್ ಇಂಡಿಯಾ
ಒಟ್ಟು ಹುದ್ದೆಗಳು: 03
ನೇಮಕಾತಿ ವಿಧಾನ: ನೇರ ಸಂದರ್ಶನ
ನೇರ ಸಂದರ್ಶನದ ದಿನಾಂಕ: ಫೆಬ್ರವರಿ 25
ಅಸ್ಸಾಂನಲ್ಲಿ ಕೆಲಸ ಮಾಡಲು ಇಚ್ಛಿಸುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಐಟಿಐ, ಡಿಪ್ಲೋಮಾ, ಎಸ್ಸೆಸ್ಸೆಲ್ಸಿ, ಡಿಗ್ರಿ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಸಂದರ್ಶನ ನಡೆಯುವ ಸ್ಥಳ
ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು oil-india.com ವೆಬ್ ಸೈಟ್ ಗೆ ಭೇಟಿ ನೀಡಬಹುದು. ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಓದಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ- Occupational Health Centre, OIL Hospital, Oil India Limited, Duliajan, Assam. ನೇಮಕಾತಿ ಹೊಂದಿದವರಿಗೆ ಮಾಸಿಕ 24,960 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಇದನ್ನೂ ಓದಿ : ವಸತಿ ಶಾಲೆಗಳ ಪ್ರವೇಶಾತಿಯ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ | ಹೊಸ ದಿನಾಂಕ ಇಲ್ಲಿದೆ


















