ದಾವಣಗೆರೆ : ಇಂದು ಬಹುನಿರೀಕ್ಷಿತ ಭಾರತ V/s ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯಕ್ಕೆ ಶುಭಹಾರೈಸುವ ನಿಟ್ಟಿನಲ್ಲಿ ಬಾಯ್ತಪ್ಪಿ ಕಾಂಗ್ರೆಸ್‌ನ್ನ ಭಾರತ ಧೂಳಿಪಟ ಮಾಡುತ್ತೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಬಾಯ್ತಪ್ಪಿ ಕಾಂಗ್ರೆಸ್‌ನ್ನ ಭಾರತ ಧೂಳಿಪಟ ಮಾಡುತ್ತೆ ಎಂದು ಬಳಿಕ ಸರಿಪಡಿಸಿಕೊಂಡು ಭಾರತ ತಂಡಕ್ಕೆ ಶುಭಾಶಯ. ಪಾಕಿಸ್ತಾನದವರು ಬಹಳ ಕಳ್ಳಾಟ ಆಡ್ತಿದ್ರು, ಆದರೆ ಅದು ನಡೀಲಿಲ್ಲ ಎಂದಿದ್ದಾರೆ.
ಭಾರತ V/s ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತ ತಂಡ ಬಗ್ಗು ಬಡಿಯುತ್ತೆ. ಭಾರತ ತಂಡಕ್ಕೆ ಶುಭವಾಗಲಿ, ಜಯ ಸಾಧಿಸಲಿ ಎಂದಿದ್ದಾರೆ.
ಇದನ್ನೂ ಓದಿ : ಮಂಡ್ಯ | ಕೆಮಿಕಲ್ ಫ್ಯಾಕ್ಟರಿ ಟ್ಯಾಂಕ್ ಸ್ಫೋಟ ; ಇಬ್ಬರು ಸಾವು



















