ದಾವಣಗೆರೆ | ಇಂಡಿಯಾ–ಪಾಕ್ ಟಿ20 ಪಂದ್ಯ ಹಿನ್ನಲೆಯಲ್ಲಿ ಟೀಂ ಇಂಡಿಯಾಗೆ ಹೊನ್ನಾಳಿ ಪಟ್ಟಣದ ಹಾಸ್ಟೆಲ್ ವಿದ್ಯಾರ್ಥಿಗಳು ಶುಭಾಶಯ ಕೋರಿದ್ದಾರೆ.
ಭಾರತ–ಪಾಕಿಸ್ತಾನ ಟಿ-20 ಪಂದ್ಯವನ್ನು ನೋಡಲು ಕಾತುರದಿಂದ ನಿರೀಕ್ಷಿಸುತ್ತಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ ವಿದ್ಯಾರ್ಥಿಗಳು “ಗೆದ್ದು ಬಾ ಇಂಡಿಯಾ… ಆಲ್ ದ ಬೆಸ್ಟ್ ಇಂಡಿಯಾ…” ಎಂಬ ಘೋಷಣೆಗಳನ್ನು ಕೂಗಿ ಚೀಯರ್ ಅಪ್ ಮಾಡಿದ್ದಾರೆ.
ಹಾಸ್ಟೆಲ್ ಆವರಣದಲ್ಲಿ ಸೇರಿದ್ದ ಮಕ್ಕಳು, ಟೀಂ ಇಂಡಿಯಾ ಗೆಲುವಿಗೆ ವಿಶ್ವಾಸ ವ್ಯಕ್ತಪಡಿಸಿ, “ಇಂದು ಪಾಕ್ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ದೇಶಭಕ್ತಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು, ಆಟಗಾರರಿಗೆ ಶುಭಾಶಯ ತಿಳಿಸಿದ್ದಾರೆ. ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ದೇಶಕ್ಕೆ ಜಯ ತಂದುಕೊಡಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : ದಳಪತಿ ಅಭಿಮಾನಿಗಳಿಗೆ ಮತ್ತೆ ನಿರಾಸೆ | ಏ.30ಕ್ಕೂ ಮುನ್ನ ‘ಜನನಾಯಕನ್’ ದರ್ಶನ ಭಾಗ್ಯವಿಲ್ಲ!



















