ಮೈಸೂರು : ಮೈಸೂರು ಅರಮನೆ ಆವರಣದಲ್ಲಿ ಶಿವರಾತ್ರಿ ಆಚರಣೆಗೆ ಸಿದ್ಧತೆ ಶುರುವಾಗಿದೆ. ಮಹಾ ಶಿವರಾತ್ರಿ ಆಚರಣೆ ಹಿನ್ನೆಲೆ ಮೈಸೂರು ಜಿಲ್ಲಾಡಳಿತದಿಂದ ಅರಮನೆಯ ತ್ರಿಣೇಶ್ವರಸ್ವಾಮಿ ದೇಗುಲದ ಅರ್ಚಕರ ಸುಪರ್ದಿಗೆ ಚಿನ್ನದ ಕೊಳಗ ಹಸ್ತಾಂತರ ಮಾಡಲಾಯಿತು.
ಪ್ರತಿ ವರ್ಷ ಮಹಾ ಶಿವರಾತ್ರಿಯ ದಿನದಂದು ತ್ರಿಣೇಶ್ವರಸ್ವಾಮಿ ದೇಗುಲದಲ್ಲಿರುವ ಮೂಲ ಶಿವಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ಬರೋಬ್ಬರಿ ಹನ್ನೊಂದು ಕೆಜಿ ಶುದ್ದ ಚಿನ್ನದಿಂದ ಮಾಡಿರುವ ಚಿನ್ನದ ಕೊಳಗವನ್ನು ಅಂದಿನ ಮೈಸೂರು ಅರಸ ಜಯಚಾಮರಾಜ ಒಡೆಯರ್ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ವೇಳೆ ಪುತ್ರ ಸಂತಾನ ಪ್ರಾಪ್ತಿಯಾದ ಕಾರಣ ತ್ರಿಣೇಶ್ವರಸ್ವಾಮಿಗೆ ಹರಕೆ ರೂಪದಲ್ಲಿ ನೀಡಿದ್ದರು.
ವರ್ಷ ಪೂರ್ತಿ ಸರ್ಕಾರದ ಸುಪರ್ದಿಯಲ್ಲಿರುವ ಈ ಚಿನ್ನದ ಕೊಳಗ. ಮಹಾಶಿವರಾತ್ರಿಯ ದಿನ ಮಾತ್ರ ತ್ರಿಣೇಶ್ವರಸ್ವಾಮಿಯ ಮೂಲ ಶಿವಲಿಂಗಕ್ಕೆ ಧರಿಸಲಾಗುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ದೇವರಿಗೆ ಧಾರಣೆ ಮಾಡುವ ಈ ಚಿನ್ನದ ಕೊಳಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಇದನ್ನೂ ಓದಿ : ಕಂಡ್ಲೂರು ಸೇತುವೆ ಮರು ನಿರ್ಮಾಣಕ್ಕೆ ಅನುದಾನ ಮಂಜೂರು | ರಾಜ್ಯ ಸರ್ಕಾರಕ್ಕೆ ಅಭಿನಂದಿಸಿದ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ



















