ಬೆಂಗಳೂರು | ಕರ್ನಾಟಕದಲ್ಲಿ ಮಾರ್ಚ್ 11ರಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಯಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದರು ಇದುವರೆಗೆ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ, ಈ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ.
ಮಾರ್ಚ್ 11ರಿಂದ 15ರವರೆಗೆ ಮೊದಲ ಹಂತದಲ್ಲಿ ಹೊರ ರೋಗಿಗಳ ವಿಭಾಗ (opd) ಬಂದ್ ಮಾಡಿ ಮುಷ್ಕರ ಮಾಡ್ತಿವಿ, ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ರೆ ಎರಡನೇ ಹಂತದಲ್ಲಿ ಮಾರ್ಚ್ 16ರಿಂದ ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸ್ತಿವಿ ಎಂದು ರಾಜ್ಯ ಸರ್ಕಾರಕ್ಕೆ ವೈದ್ಯರು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ವೈದ್ಯರ ಸಂಘದ ಅಧ್ಯಕ್ಷ ಡಾ. ವೀಂದ್ರನಾಥ ಮೇಟಿ ಅವರು ಈ ಬಗ್ಗೆ ಮಾತನಾಡಿ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆಯ ನೌಕರರು ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಮುಷ್ಕರದ ವೇಳೆ ರೋಗಿಗಳಿಗೆ ಏನಾದರು ತೊಂದರೆ ಆದರೆ ಅದಕ್ಕೆ ನೇರವಾಗಿ ಸರ್ಕಾರ ಹಾಗೂ ಅರೋಗ್ಯ ಮಂತ್ರಿಗಳೇ ಕಾರಣ ಎಂದು ತಿಳಿಸಿದ್ದಾರೆ.

ಇನ್ನೂ, ನಮ್ಮ ಸಂಘ ಸರ್ಕಾರಕ್ಕೆ ಹಲವು ಬಾರಿ ಮಾನವಿ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಯ ಮಾಡಿದರೂ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿದ್ದೇವೆ. ಆರೋಗ್ಯ ಇಲಾಖೆಯಲ್ಲಿ ಸುಮಾರು 7 ಸಾವಿರ ವೈದ್ಯರು ಕೆಲಸಕ್ಕೆ ಗೈರು ಹಾಕ್ತಿವಿ. ಹಾಗೆಯೇ ಆರೋಗ್ಯ ಇಲಾಖೆಯ ಸುಮಾರು 60 ಸಾವಿರ ಸಿಬ್ಬಂದಿಗಳು ಕೂಡ ನಮ್ಮ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಸರ್ಕಾರಕ್ಕೆ ಮಾರ್ಚ 10ರವರೆಗೆ ಡೆಡ್ ಲೈನ್ ಕೊಡುತ್ತಿದ್ದೇವೆ. ಸರ್ಕಾರ ಬೇಗ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವದರೆ ಮುಷ್ಕರ ಅನಿವಾರ್ಯ ಎಂದು ಡಾ. ರವೀಂದ್ರನಾಥ ಮೇಟಿ ಎಚ್ಚರಿಕೆ ನೀಡಿದ್ದಾರೆ.
ವೈದ್ಯರ ಬೇಡಿಕೆಳೇನು?
- ಸಮರ್ಪಕ ಔಷಧಿ ಪೂರೈಕೆಗೆ ಒತ್ತಾಯ.
- ಔಷಧಿ ಪೂರೈಕೆ ಆಗ್ತಿಲ್ಲ ಅಂತಾ ಸರ್ಕಾರಕ್ಕೆ ಮನವಿ ಮಾಡಿತ್ತು .
- ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕಾಗಿ ಒತ್ತಾಯ.
- ಎಲ್ಲಾ ವೃಂದಗಳ ಜೇಷ್ಠತ ಪಟ್ಟಿ ಪ್ರಕಟಿಸುವುದು .
- ಎಲ್ಲಾ ವೃಂದಗಳ ಮುಂಬಡ್ತಿ .
- ವರ್ಗಾವಣೆ ಕಾಯ್ದೆಗೆ ಮಾರ್ಪಾಡು.
- ಸೇವಾ ನಿರತ ನೌಕರರರ ಉನ್ನತ ವ್ಯಾಸಾಂಗ.
- ಜಿಲ್ಲಾಸ್ಫತ್ರೆ ಸ್ವಾಯತ್ತ ಸಂಸ್ಥೆ ಹುದ್ದೆಗಳು.
- ಖಾಲಿ ಹುದ್ದೆಗಳ ನೇಮಕಾತಿ.
- ಎಂಸಿಹೆಚ್ ತಙ್ಞರ ಮರು ಹೊಂದಾಣಿಕೆ.
- ಗುತ್ತಿಗೆ ವೈದ್ಯರು ಮತ್ತು ನೌಕರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ.
- ಕರ್ತವ್ಯ ನಂತರ ಖಾಸಗಿ ವೈದ್ಯಕೀಯ ಸೇವೆಗೆ ಕಡಿವಾಣಕ್ಕೆ ಒತ್ತಾಯ.
- ವ್ಯತಿರಿಕ್ತ ಆದೇಶ ಗಳನ್ನ ಹಿಂಪಡೆಯಲು ಒತ್ತಾಯ.
ಇದನ್ನೂ ಓದಿ : ಕಲಬುರಗಿಯಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹ*ತ್ಯೆ!



















