ಕೋಲಾರ | ಆದಾಯ ಪ್ರಮಾಣ ಪತ್ರ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿರುವ ಕಂದಾಯ ನಿರೀಕ್ಷಕ ಅಧಿಕಾರಿಯ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕು ಕಚೇರಿಯಲ್ಲಿ ನಡೆದಿದೆ.
ಕಂದಾಯ ನಿರೀಕ್ಷಕ ಚಂದ್ರಮೋಹನ್ ಮೇಲೆ ಆ್ಯಂಡರ್ಸನ್‌ಪೇಟೆ ಲಕ್ಷ್ಮಿ ಟಾಕೀಸ್ ಸಮೀಪದ ನಿವಾಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಹಲವು ದಿನಗಳು ಕಳೆದರು ಅನಗತ್ಯ ವಿಳಂಬ ಮಾಡಿರುವ ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಶಕ್ಕೆ ಒಳಗಾದ ಅರ್ಜಿದಾರರು ಅಧಿಕಾರಿ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.
ಈ ವೇಳೆ ಕಾಲಿಂದ ಚಪ್ಪಲಿ ತೆಗೆದುಕೊಂಡು ಏಕಾಏಕಿ ಹಲ್ಲೆಗೆ ಯತ್ನಿಸಲಾಗಿದೆ. ಬಳಿಕ ಸ್ಥಳೀಯರು ಹಲ್ಲೆ ಮಾಡಲು ಮುಂದಾದ ಅರ್ಜಿದಾರನನ್ನ ತಡೆದಿದ್ದಾರೆ. ನಂತರ ಅರ್ಜಿದಾರ ನೀಡಿದ ದಾಖಲೆಯ ಸ್ತಳದಲ್ಲಿ ವಾಸವಿಲ್ಲ ಎಂದು ಕಂದಾಯ ನಿರೀಕ್ಷಕ ಚಂದ್ರಮೋಹನ್ ಸಬೂಬು ನೀಡಿದ್ದು. ಮತ್ತೊಮ್ಮೆ ಪರಿಶೀಲನೆ ಮಾಡುವುದಾಗಿ ಅಧಿಕಾರಿ ಭರವಸೆ ನೀಡಿದ ಬಳಿಕ ಹಲ್ಲೆ ಮಾಡಲು ಮುಂದಾದ ಅರ್ಜಿದಾರ ಕ್ಷಮೆಯಾಚಿಸಿದ್ದಾರೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ : ಸರ್ಕಾರಿ ನೌಕರರೇ ಗಮನಿಸಿ | ನಿಮ್ಮ ಸಂಬಳ ಹೆಚ್ಚಾಗಲು ಮೊದಲು ಈ ಕೆಲಸ ಮಾಡಿ



















