ಬೆಂಗಳೂರು : ರಾಜ್ಯದಲ್ಲಿ ಕುರ್ಚಿ ಕದನ ಜೋರಾಗುತ್ತಿದ್ದಂತೆ ಸಿಎಂ–ಡಿಸಿಎಂ ನಡುವೆ ಮುನಿಸು ಜೋರಾಯ್ತಾ ಎನ್ನುವ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಎದ್ದಿದೆ.
ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕದಲ್ಲೇ ಕುಳಿತಿದ್ದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಹೀಗಾಗಿ ಇಬ್ಬರು ನಾಯಕರ ನಡುವೆ ಮುನಿಸು ಜೋರಾಗಿದೆಯೇ ಎನ್ನುವ ಪ್ರಶ್ನೆ ಇದೀಗಾ ತಲೆದೂರಿದೆ.
ಕೈ ಪಡೆಯಲ್ಲಿ ಅಧಿಕಾರ ಹಂಚಿಕೆ ಸಂಘರ್ಷಜೋರಾಗಿದ್ದು, ನಿನ್ನೆ ಡಿ.ಕೆ.ಶಿವಕುಮಾರ್ ಸೋನಿಯಾಗಾಂಧಿ, ರಾಹುಲ್ ಗಾಂಧಿಯನ್ನ ಭೇಟಿಯಾಗಿದ್ದರು. ಆ ಮೂಲಕ ಮತ್ತೆ ದೆಹಲಿ ಅಂಗಳಕ್ಕೆ ಅಧಿಕಾರ ಹಂಚಿಕೆ ಚೆಂಡು ಶಿಫ್ಟ್ ಆಗಿದೆ.
ಶೀಘ್ರದಲ್ಲೇ ಹೈ ಕಮಾಂಡ್ ನಾಯಕರಿಂದ ಇಬ್ಬರು ನಾಯಕರಿಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಇಬ್ಬರನ್ನ ದೆಹಲಿಗೆ ಕರೆಸಿಕೊಂಡು ಮಾತುಕತೆಗೆ ಹೈ ಕಮಾಂಡ್ ಮುಂದಾಗ್ತಾರಾ? ಆಂತರಿಕ ಸಂಘರ್ಷಕ್ಕೆ ಹೈ ಕಮಾಂಡ್ ಮುಲಾಮು ಹಚ್ಚುತ್ತಾ? ಎಂಬ ಪ್ರಶ್ನೆಗಳು ರಾಜಕೀಯವಲಯದಲ್ಲಿ ಮೂಡುತ್ತಿದೆ.
ಪಂಚ ರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಸ್ಥಳೀಯ ಚುನಾವಣೆ ಸಮೀಪ ಹಿನ್ನೆಲೆ ಇಂತಹ ಹಂತದಲ್ಲಿ ಬದಲಾವಣೆ ಜೇನುಗೂಡಿಗೆ ಕೈ ಹಾಕಲು ಹೈ ಕಮಾಂಡ್ ಹಿಂದೇಟು ಕಾಹುತ್ತಿದೆ. ಹೀಗಾಗಿ ಈ ಬಾರಿಯೂ ಕೂಡ ಬಹುತೇಕ ಸಂದಾನ ಮೋರೆ ಹೋಗುವ ಸಾಧ್ಯತೆ ಇದೆ. ಹಾಗಾಗೀ ರಾಜ್ಯ ರಾಜ್ಯಕಾರಣದ ಚಿತ್ತ ಇದೀಗ ದೆಹಲಿ ನಾಯಕರ ನಡೆಯತ್ತ ಇದೆ.
ಇದನ್ನೂ ಓದಿ : ಮುನಿಸು ಶಮನ ಬೆನ್ನಲ್ಲೇ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಜಮೀರ್-ಗವಿಯಪ್ಪ



















