ವಿಜಯನಗರ : ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಶಾಸಕ ಗವಿಯಪ್ಪ ಮಧ್ಯದ ಮುನಿಸು ಶಮನ ಬೆನ್ನಲ್ಲೇ ಒಗ್ಗಟ್ಟು ಪ್ರದರ್ಶನಕ್ಕೆ ಸಚಿವ, ಶಾಸಕರು ಮುಂದಾಗಿದ್ದಾರೆ.

ಹೊಸಪೇಟೆ ನಗರದ ಶಾಸಕ ಗವಿಯಪ್ಪ ಮನೆಗೆ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿದ್ದಾರೆ. ಮನೆಗೆ ಆಗಮಿಸಿದ ಸಚಿವ ಜಮೀರ್ ಅವರನ್ನು ಶಾಸಕ ಗವಿಯಪ್ಪ ಸಂಭ್ರಮದಿಂದ ಬರಮಾಡಿಕೊಂಡು ಸ್ವಾಗತಿಸಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ನಾನೊಂದು ತೀರ, ನೀನೊಂದು ತೀರದಂತೆ ಇದ್ದತೆ ಶಾಸಕ, ಸಚಿವರು. ಕೆಡಿಪಿ ಮೀಟಿಂಗ್ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಚಿವ ಜಮೀರ್ ಇರುವ ಕಾರ್ಯಕ್ರಮಗಳಿಂದ ದೂರ ಉಳಿದು ವಿಜಯನಗರ ಶಾಸಕ ಹೆಚ್.ಆರ್ ಗವಿಯಪ್ಪ ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿದ್ದರು.
ನಿನ್ನೆ ಸಿಎಂ ಭೇಟಿ ವೇಳೆ ಶಾಸಕ ಗವಿಯಪ್ಪಗೆ ಸೂಚನೆ ನೀಡಿದ ಹಿನ್ನೆಲೆ ಇಂದು ಹಂಪಿ ಉತ್ಸವದ ಕಾರ್ಯಕ್ರಮಗಳಿಗೆ ಭಾಗಿಯಾಗುವ ಮೂಲಕ ತಿಂಗಳುಗಟ್ಟಲೇ ಇದ್ದ ಮುನಿಸು ಶಮನವಾಗಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು | ನಮೀಬಿಯಾ ವಿರುದ್ಧ ಅಬ್ಬರಿಸಿ ವಿಶ್ವದಾಖಲೆ ಬರೆದ ಟೀಮ್ ಇಂಡಿಯಾ!



















