ಬೆಂಗಳೂರು : ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿರೋ ಸರ್ಕಾರದ ಕ್ರಮವನ್ನ ವಿಪಕ್ಷ ನಾಯಕ ಆರ್. ಅಶೋಕ್ ಖಂಡಿಸಿದ್ದು, ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಜನರ ತೆರಿಗೆ ಹಣವನ್ನ ಮೋಜು ಮಸ್ತಿಗೆ ಖರ್ಚು ಮಾಡ್ತಾ ಇದೆ. ನನಗೆ ಇರೋ ಮಾಹಿತಿ ಇದನ್ನ ರಾಜ್ಯಪಾಲರು ಕೂಡ ಪ್ರಶ್ನೆ ಮಾಡಿದ್ದಾರೆ. ಯಾವ ಆಧಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಸಂಪುಟ ದರ್ಜೆ ಕೊಟ್ಟಿದ್ದೀರಾ ಅಂತಾ ರಾಜ್ಯದ ಜನರು ಪ್ರಶ್ನೆ ಮಾಡ್ತಿದ್ದಾರೆ. ಈ ಸರ್ಕಾರದ ಬಳಿಕ ಸಂಬಳ ಕೊಡೋಕೆ ಹಣ ಇಲ್ಲ. ಗೃಹಲಕ್ಷ್ಮಿಗೆ, ಅನ್ನಭಾಗ್ಯಕ್ಕೆ ಹಣ ಕೊಡೋಕೆ ಆಗಿಲ್ಲ. ಶಾಸಕರಿಗೆ ಮೋಜು ಮಸ್ತಿ ಮಾಡಲು ಮುಂದಾಗಿದ್ದಾರೆ. ಕೂಡಲೇ ಸಚಿವ ಸಂಪುಟ ದರ್ಜೆ ಸ್ಥಾನವನ್ನ ಸರ್ಕಾರ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂತ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲಿ ಮಾತಾಡಲಿ, ಅದು ಬಿಟ್ಟು ಹೊರಗೆ ಬಂದು ಮಾತಾಡೋದು ಯಾಕೆ ಎಂದು ವಿಪಕ್ಷ ನಾಯಕ ಕುರ್ಚಿ ಕಿತ್ತಾಟಕ್ಕೆ ಕಿಡಿಕಾರಿದ್ದಾರೆ.
ನಾನು ಸಿಎಂ ಆಗಬೇಕು ಎಂಬುದು ಜನರ ಆಸೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಇಷ್ಟು ದೇವಸ್ಥಾನ ಸುತ್ತಿದರು. ಪಾಪ ದೇವರು ವರ ಕೊಟ್ಟಿಲ್ಲ. ಈಗ ಜನರ ಮಧ್ಯೆ ಬಂದಿದ್ದಾರೆ. ಜನ ವರ ಕೊಡ್ತಾರಾ ಗೊತ್ತಿಲ್ಲ. ಡಿಕೆಶಿ ಸಿಎಂ ಆಗಲಿ ಅಂತ CLP ಸಭೆಯಲ್ಲಿ ಮಾತಾಡಲಿ, ಹೊರಗೆ ಬಂದು ಯಾಕೆ ಮಾತಾಡಬೇಕು ಅಂತ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : 2.5 ಕೋಟಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿದ ಸರ್ಕಾರ | ನಿಮ್ಮ ಕಾರ್ಡ್ ಗತಿ ಏನಾಗಿದೆ ತಿಳಿಯಿರಿ



















