ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಜೆಟ್ ಲಘು ವಿಮಾನವೊಂದು ಪತನಗೊಂಡಿದೆ. ಈ ವಿಮಾನದಲ್ಲಿ ಇಬ್ಬರು ಪ್ರಯಾಣಿಕರಿದ್ದು, ಇಬ್ಬರಿಗೂ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಈ ವಿಮಾನ ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿತ್ತು. ಇಂಧನ ಖಾಲಿಯಾದ ಕಾರಣ ವಿಮಾನ ಜಮೀನಿನಲ್ಲಿ ಪತನಗೊಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಇಂಧನ ಖಾಲಿಯಾಗಿ ಕೆಳಗೆ ಬಿದ್ದ ಪರಿಣಾಮ ವಿಮಾನದಲ್ಲಿದ್ದವರ ಜೀವಕ್ಕೆ ಅನಾಹುತವಾಗಿಲ್ಲಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ರೆಡ್ ಬರ್ಡ್ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ರೈತರ ಜಮೀನಿನ ಮೇಲೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೆಟ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಆದರೆ ಈ ವಿಚಾರ ತಿಳಿದು ಅಲ್ಲಿ ನೂರಾರು ಜನ ಸೇರಿದ್ದು, ವಿಮಾನದ ಅವಶೇಷಗಳನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.
ಇದನ್ನೂ ಓದಿ : ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ | ಗಂಭೀರ ಗಾಯ



















