ಬೆಳಗಾವಿ : ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ, 1.25 ಲಕ್ಷ ರೂಪಾಯಿ ಮೌಲ್ಯದ ಐದು ಬೈಕ್‌ಗಳನ್ನು ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ತಾಲ್ಲೂಕಿನ ಕಂಗ್ರಾಳಿಯಲ್ಲಿ ನಡೆದಿದೆ.
ಬಂಧಿತರನ್ನು ನಿಪ್ಪಾಣಿ ಮೂಲದ ಸೈಫ್ ಅಲ್ಲಿ ನಾಗರ್ಜಿ ಹಾಗೂ ನೇಹಾನ್ ಮುಜಾವರ ಎಂದು ಗುರುತಿಸಲಾಗಿದೆ.ಬೈಕ್ ಮತ್ತು ಸ್ಕೂಟರ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರ ವಿಚಾರಣೆ ವೇಳೆ ವಿವಿಧ ಕಡೆಗಳಿಂದ ಕಳವು ಮಾಡಿದ್ದ ಐದು ಬೈಕ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಶಿಕ್ಷಕನಿಂದಲೇ ವರದಕ್ಷಣೆ ಕಿರುಕುಳ ಆರೋಪ | ನೊಂದ ಮಹಿಳೆಯಿಂದ ದೂರು



















