ಹುಬ್ಬಳ್ಳಿ : ಹುಬ್ಬಳ್ಳಿಯ ತಾರಿಹಾಳ ಗ್ರಾಮದ ಸರ್ಕಾರಿ ಶಾಲೆಯ ಮಧ್ಯಾಹ್ನ ಬಿಸಿಯೂಟದ ಸಾಂಬಾರಿನಲ್ಲಿ ನುಸಿ ಹುಳ ಪತ್ತೆ ಆಗಿರುವಂತಹ ಆಘಾತಕಾರಿ ಘಟನೆ ನಡೆದಿದೆ.
ತಾರಿಹಾಳ ಸೇರಿ ವಿವಿಧ ಶಾಲೆಗೆ ಮಧ್ಯಾಹ್ನ ಬಿಸಿ ಊಟ ಅನ್ನ ಮತ್ತು ಸಾಂಬಾರು ಪೂರೈಕೆ ಮಾಡಲಾಗಿತ್ತು. ಬಹುತೇಕ ಶಾಲೆಗಳಿಗೆ ಪೂರೈಕೆ ಮಾಡಿದ್ದ ಸಾಂಬಾರನಲ್ಲಿ ನುಸಿ ಹುಳ ಪತ್ತೆ ಆಗಿದೆ.
ಸಾಂಬಾರಿನಲ್ಲಿ ನುಸಿ ನೋಡಿದ ವಿದ್ಯಾರ್ಥಿಗಳು ಊಟ ಬಿಟ್ಟು ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಊಟ ಪೂರೈಸುವ ಸಂಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಸುಪ್ರಭಾತ ಹಾಕಿದ್ದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್.. ವಿಡಿಯೋ ವೈರಲ್!



















