ಬೆಂಗಳೂರು : ಸಿದ್ದರಾಮಯ್ಯ ʻಹೌದು ಹುಲಿಯಾʼ ಆಗಿ ಉಳಿದಿಲ್ಲ. ಅವರೀಗ ಹೌದು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಿಎಂಗೆ ವಿಧಾನಸಭೆಯಲ್ಲಿ ಕಾಲೆಳೆದಿದ್ದಾರೆ.
ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಸಿದ ಆರ್ ಅಶೋಕ್, ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ್ರು. ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ʻಹೌದು ಹುಲಿಯಾ ಆಗಿ ಅವ್ರು ಉಳಿದಿಲ್ಲ, ಹೌದು ಇಲಿಯಾʼ ಆಗಿದ್ದಾರೆ. ಲೂಟಿಕೋರ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವ ಆಡ್ತಿದೆ. ಸರ್ಕಾರಕ್ಕೆ ನೈತಿಕತೆ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ 17ನೇ ಬಜೆಟ್ ಮಂಡಿಸ್ತಿದ್ದಾರೆ. 18, 19ನೇ ಬಜೆಟ್ ಮಂಡಿಸೋದಾಗಿಯೂ ಹೇಳಿದ್ದಾರೆ. ಸಿಎಂಗೆ ಕಂಗ್ರಾಜುಲೇಷನ್ಸ್ ಅಂತ ಅಶೋಕ್ ಟಾಂಗ್ ಕೊಟ್ರು. ಕೋಗಿಲು ಲೇಔಟ್‌ನಲ್ಲಿದ್ದ ನುಸುಳುಕೋರರ ಪರ ಅನುಕಂಪ. ಕನ್ನಡಿಗರತ್ತ ನಿರ್ಲಕ್ಷ್ಯ. ಅಧಿಕಾರಿಗಳಿಗೆ ಸರ್ಕಾರದಲ್ಲಿ ಬೆದರಿಕೆ ಹಾಕಲಾಗ್ತಿದೆ. ಆತ್ಮಹತ್ಯೆ ಭಾಗ್ಯ ಸಿಕ್ತಿದೆ. ಎರಡು ತಿಂಗಳ ಗೃಹಲಕ್ಷ್ಮಿ, ಒಂದು ತಿಂಗಳ ಅಕ್ಕಿ ಹಣ ಕೊಟ್ಟಿಲ್ಲ. ಇವೆರಡರ 5,675 ಕೋಟಿ ರೂ. ಎಲ್ಲಿಗೆ ಹೋಯ್ತು ಅಂತ ಇದೇವೇಳೆ ಅಶೋಕ್ ಪ್ರಶ್ನಿಸಿದ್ದಾರೆ.
ಇನ್ನೂ ಮನ್ರೇಗಾ ಯೋಜನೆಗೆ ಗಾಂಧೀಜಿ ಹೆಸರು ತೆಗೆದ ಬಗ್ಗೆ ಆಕ್ಷೇಪಿಸಿದ ಕಾಂಗ್ರೆಸ್‌ಗೆ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರಿನ ಅನೇಕ ಯೋಜನೆಗಳ ಹೆಸರುಗಳಿರುವ ಪಟ್ಟಿಯನ್ನು ಓದಿ ಅಶೋಕ್ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಬಲೂಚಿಸ್ತಾನ ದಾಳಿಯಲ್ಲಿ ಭಾರತದ ಕೈವಾಡ ಆರೋಪ | ಪಾಕಿಸ್ತಾನಕ್ಕೆ ಭಾರತ ಖಡಕ್ ತಿರುಗೇಟು!



















