ಕನಕಪುರ : ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ನಗರದ ಅಮರ ನಾರಾಯಣ ಬ್ಲಾಕ್‌ನಲ್ಲಿ ಜ. 26ರಂದು ಅಡಿಗೆ ಮಾಡುವ ವೇಳೆ ಉಂಟಾದ ಗ್ಯಾಸ್ ಲೀಕ್ ಪರಿಣಾಮವಾಗಿ ಬೆಂಕಿ ಹಚ್ಚಿದ ಘಟನೆ ಸಂಭವಿಸಿದ್ದು, ಸಿದ್ದರಾಜು (55), ಅವರ ಪತ್ನಿ ಚಂದ್ರಮ್ಮ (50) ಹಾಗೂ ಪುತ್ರ ಪ್ರಶಾಂತ್ (22) ಸಾವನ್ನಪ್ಪಿದ್ದಾರೆ.
ಅಗ್ನಿ ಅವಘಡದ ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಒಂದೇ ಕುಟುಂಬದ ಮೂವರು ಬದುಕಿ ಉಳಿಯದೆ ಸಾವಿಗೆ ತುತ್ತಾಗಿದ್ದಾರೆ. ಈ ಘಟನೆ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿತು.
ಅಡಿಗೆ ಮಾಡುವ ವೇಳೆ ಅನಿಲ ಸೋರಿಕೆಯು ಬೆಂಕಿ ಹೊತ್ತಿಕೊಂಡು ಈ ಭೀಕರ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರ ಪ್ರಾಥಮಿಕ ವರದಿ ತಿಳಿಸಿದೆ.
ಇದನ್ನೂ ಓದಿ : ಬೆಂಗಳೂರು | ಯರ್ರಾಬಿರ್ರಿಯಾಗಿ ಕಾರು ಚಾಲನೆ ; ರಸ್ತೆ ಡಿವೈಡರ್‌ಗೆ ಡಿಕ್ಕಿ



















