ಬೆಂಗಳೂರು: ಗಗನಕ್ಕೇರಿದ್ದ ಬೆಳ್ಳಿಯು ಕೊನೆಗೂ ಭಾರಿ ಇಳಿಕೆ ಕಂಡಿದೆ. ಕಳೆದ ಒಂದು ವಾರದಲ್ಲಿ ಒಂದು ಕೆ.ಜಿ ಬೆಲೆಯಲ್ಲಿ 55 ಸಾವಿರ ರೂಪಾಯಿ ಏರಿಕೆ (Silver Price Down) ಕಂಡಿತ್ತು. ಶನಿವಾರ ಒಂದೇ ದಿನ 45 ಸಾವಿರ ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ಖರೀದಿದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ, ಬೆಳ್ಳಿಯ ಮೇಲೆ ಹೂಡಿಕೆ ಮಾಡಿದವರಿಗೆ ಭಾರಿ ನಷ್ಟವೂ ಆಗಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಹೌದು, ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆಯಾದ ಕಾರಣ ಭಾರತದಲ್ಲೂ ಇಳಿಕೆ ಕಂಡಿದೆ. ಒಂದು ಕೆ.ಜಿ ಬೆಳ್ಳಿಯ ಬೆಲೆ ಈಗ 3.5 ಲಕ್ಷ ರೂಪಾಯಿ ಆಗಿದೆ. ಎರಡು ದಿನಗಳ ಹಿಂದಷ್ಟೇ ಬೆಳ್ಳಿಯ ಬೆಲೆಯು ಕೆ.ಜಿಗೆ 4 ಲಕ್ಷ ರೂಪಾಯಿ ದಾಟಿತ್ತು. ಇದರಿಂದಾಗಿ ಬೆಳ್ಳಿ ಖರೀದಿ ಮಾಡುವವರಿಗೆ ಆತಂಕ ಎದುರಾಗಿತ್ತು. ಈಗ ಒಂದು ಗ್ರಾಂ ಬೆಳ್ಳಿಯ ದರವು 350 ರೂಪಾಯಿಗೆ ಇಳಿಕೆಯಾಗಿದೆ.
ಚಿನ್ನದ ಬೆಲೆಯೂ ಇಳಿಕೆ
ಮತ್ತೊಂದೆಡೆ, ಬೆಲೆಯಲ್ಲಿ ನಾಗಾಲೋಟ ಆರಂಭಿಸಿದ್ದ ಚಿನ್ನದ ಬೆಲೆಯಲ್ಲೂ ಶನಿವಾರ ಭಾರಿ ಇಳಿಕೆಯಾಗಿದೆ. 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 862 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯೀಗ 16,058 ರೂಪಾಯಿ ಆಗಿದೆ. ಇದೇ ರೀತಿ, 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲೂ 790 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಗ್ರಾಂಗೆ 14,720 ರೂಪಾಯಿ ಆಗಿದೆ.
ಇದರ ಜತೆಗೆ 18 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 646 ರೂಪಾಯಿ ಇಳಿಕೆಯಾಗಿದೆ. ಒಂದು ಗ್ರಾಂ ಬಂಗಾರದ ಬೆಲೆ ಈಗ 12,044 ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಅತ್ತ ಬೆಳ್ಳಿಯ ಬೆಲೆಯಲ್ಲಿ ಇನ್ನೂ ಶೇ.30ರಷ್ಟು ಕುಸಿಯಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಡುವುದಿಲ್ಲ “ಚಿಲ್ಲರೆ’’ ಸಮಸ್ಯೆ | ಎಟಿಎಂಗಳಲ್ಲೂ ಸಿಗಲಿವೆ 10, 20, 50 ರೂ. ನೋಟುಗಳು



















