ಬೆಂಗಳೂರು: ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆ, ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಜಿಎಸ್‌ಟಿ ಕಡಿತಗೊಳಿಸುವಂತೆ ಮನವಿ ಮಾಡಿದೆ.

ಪತ್ರದಲ್ಲಿ ಮುಖ್ಯವಾಗಿ ಆನ್‌ಲೈನ್ ಡೆಲಿವರಿ ಪೋರ್ಟಲ್‌ಗಳು, ಆನ್‌ಲೈನ್ ಸೇವೆಗಳು ಹಾಗೂ ಹೋಟೆಲ್ ಕಟ್ಟಡಗಳ ಬಾಡಿಗೆಯ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿಯನ್ನು ಇಳಿಸಬೇಕೆಂದು ಒತ್ತಾಯಿಸಲಾಗಿದೆ.
ಹೋಟೆಲ್ ಉದ್ಯಮವು ಈಗಾಗಲೇ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚಗಳಿಂದ ಸಂಕಷ್ಟದಲ್ಲಿದ್ದು, ಜಿಎಸ್‌ಟಿ ಭಾರ ಮತ್ತಷ್ಟು ಒತ್ತಡ ತಂದಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿ ಸೇರಿದಂತೆ ಯಾವುದೇ ಆನ್‌ಲೈನ್ ಸೇವಾ ಪೂರೈಕೆದಾರರ ಜಿಎಸ್‌ಟಿ ಮೇಲೆ ಹೆಚ್ಚುವರಿ ಸೇವಾ ಶುಲ್ಕ ವಿಧಿಸಬಾರದು ಎಂದು ಮನವಿ ಮಾಡಲಾಗಿದೆ.
ಇದಲ್ಲದೆ, ಹೋಟೆಲ್ ಕಟ್ಟಡಗಳ ಮೇಲಿನ ಬಾಡಿಗೆಗೆ ವಿಧಿಸಲಾಗುತ್ತಿರುವ 18 ಶೇಕಡಾ ಜಿಎಸ್‌ಟಿಯನ್ನು 5 ಶೇಕಡಕ್ಕೆ ಇಳಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದ್ದು, ಮತ್ತೊಂದೆಡೆ, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಪೋರ್ಟಲ್‌ನಲ್ಲಿ ಸೇವಾ ಶುಲ್ಕವನ್ನು ಪ್ರಸ್ತುತ 0.5 ಶೇಕಡದಿಂದ 0.1 ಶೇಕಡಕ್ಕೆ ಇಳಿಸಬೇಕು ಎಂಬ ಬೇಡಿಕೆಯನ್ನೂ ಹೋಟೆಲ್ ಮಾಲೀಕರು ಮುಂದಿಟ್ಟಿದ್ದಾರೆ.
ಇದನ್ನೂ ಓದಿ : ಉದ್ಯಮಿ ಮೋಹನ್ ದಾಸ್ ಪೈ v/s ಸಚಿವ ರಾಮಲಿಂಗಾರೆಡ್ಡಿ ಎಕ್ಸ್ ವಾರ್ | ಸಾರಿಗೆ ವ್ಯವಸ್ಥೆ ಕುರಿತು ಭಾರೀ ಚರ್ಚೆ



















