ಬೆಂಗಳೂರು: ಜಾಗತಿಕ ಭೌಗೋಳಿಕ ಸಂಘರ್ಷದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗುತ್ತಿದೆ. ಹಾಗಾಗಿ, ಜನ ಮ್ಯೂಚುವಲ್ ಫಂಡ್ ಎಸ್ಐಪಿಗಳ ಬದಲಾಗಿ ಗೋಲ್ಡ್ ಹಾಗೂ ಸಿಲ್ವರ್ ಇಟಿಎಫ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಯಾದ ಎಸ್ ಬಿಐ ಮ್ಯೂಚುವಲ್ ಫಂಡ್ ಈಗ ಹೊಸ ಮ್ಯುಚುವಲ್ ಫಂಡ್ ಆರಂಭಿಸಿದೆ.
ಹೌದು, ಎಸ್ ಬಿಐ ಮ್ಯೂಚುವಲ್ ಫಂಡ್ ಈಗ ಎಸ್ ಬಿಐ ಕ್ವಾಲಿಟಿ ಫಂಡ್ ಎಂಬ (SBI Quality Fund ) ನ್ಯೂ ಫಂಡ್ ಆಫರ್ (NFO) ಆರಂಭಿಸಿದೆ. 2026ರ ಜನವರಿ 28ರಿಂದಲೇ ಜನರಿಗೆ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಇದು ಓಪನ್ ಎಂಡೆಡ್ ಈಕ್ವಿಟಿ ಸ್ಕೀಮ್ ಆಗಿದ್ದು, ಮಾರುಕಟ್ಟೆಯಲ್ಲಿ ಬಲಿಷ್ಠವಾಗಿರುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಜನ ಇದರಲ್ಲಿ ಫೆಬ್ರವರಿ 11ರವರೆಗೆ ಹೂಡಿಕೆ ಮಾಡಬಹುದಾಗಿದೆ.
ಕನಿಷ್ಠ 5 ಸಾವಿರ ರೂಪಾಯಿಯಿಂದ ಜನ ಹೂಡಿಕೆ ಮಾಡಬಹುದಾಗಿದೆ. ಪ್ರತಿದಿನ, ವಾರಕ್ಕೊಮ್ಮೆ, ಮಾಸಿಕ, ಮೂರು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ಎಸ್ಐಪಿ ಮೂಲಕವೂ ಹಣ ಹೂಡಿಕೆ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಅನೂಪ್ ಉಪಾಧ್ಯಾಯ ಅವರು ಇದರ ಫಂಡ್ ಮ್ಯಾನೇಜರ್ ಆಗಿದ್ದಾರೆ.
ಈಕ್ವಿಟಿ ಅಥವಾ ಈಕ್ವಿಟಿ ಆಧಾರಿತ ಫಂಡ್ ಗಳಲ್ಲಿ ಶೇ.80ರಿಂದ ಶೇ.100ರಷ್ಟು ಹೂಡಿಕೆ ಮಾಡಲಾಗುತ್ತದೆ. ಹಾಗೆಯೇ, ಶೇ.20ರಷ್ಟು ಮೊತ್ತವನ್ನು ಡೆಟ್ ಫಂಡ್ ಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಹೇಳಿದೆ. ಹೂಡಿಕೆ ಮಾಡಿದ ಆರು ತಿಂಗಳೊಳಗೆ ಹಣ ಹಿಂಪಡೆದರೆ ಶೇ.1ರಷ್ಟು ಎಕ್ಸಿಟ್ ಲೋಡ್ ಇರುತ್ತದೆ. ಆರು ತಿಂಗಳ ನಂತರ ಹಿಂಪಡೆದರೆ ಯಾವುದೇ ಶುಲ್ಕವಿರುವುದಿಲ್ಲ.
ಗಮನಿಸಿ:
ಮ್ಯೂಚುವಲ್ ಫಂಡ್ ಹೂಡಿಕೆಗಳ ರಿಟರ್ನ್ ಮಾರುಕಟ್ಟೆ ಆಧಾರಿತವಾಗಿರುತ್ತದೆ. ಅಂದರೆ, ಹೂಡಿಕೆಯು ರಿಸ್ಕ್ ನಿಂದ ಕೂಡಿರುತ್ತದೆ. ನಾವು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಿದ್ದೇವೆ. ಯಾವುದೇ ಮಾದರಿಯ ಹೂಡಿಕೆಗಾಗಿ ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ: ಕೇಂದ್ರ ಸರ್ಕಾರದ AIESL ಸಂಸ್ಥೆಯಲ್ಲಿ ನೇಮಕಾತಿ | 1.2 ಲಕ್ಷ ರೂಪಾಯಿ ಭರ್ಜರಿ ಸಂಬಳ



















