ದೊಡ್ಡಬಳ್ಳಾಪುರ: ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೊಡಲಿಲ್ಲ ಎಂದು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.
ಸುಶಾಂತ್ ಎಂಬ ವ್ಯಕ್ತಿಯ ಮೇಲೆ ಉಜ್ಬಲ್ ಪ್ರಸಾದ್, ಪ್ರಿನ್ಸ್ ಮತ್ತು ಸೂರಜ್ ರಾಮ್ ಎಂಬ ಆರೋಪಿಗಳು ಹಲ್ಲೆಗೈದಿದ್ದಾರೆ. ಹೊಸ ವರ್ಷದಂದು ಪಾರ್ಟಿ ಮಾಡ್ತಿದ್ದ ವೇಳೆ ನಡೆದುಕೊಂಡು ಹೋಗ್ತಿದ್ದಾಗ ಸುಶಾಂತ್ ಬಳಿ ಬೆಂಕಿಪಟ್ಟಣ ಕೇಳಿದ್ದರು. ಇಲ್ಲ ಅಂತ ಅವನ ಪಾಡಿಗೆ ಅವನು ಹೋಗ್ತಿದ್ದಕ್ಕೆ ತಂದುಕೊಡು ಅಂತ ಅವಾಜ್ ಹಾಕಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ.
ಬಚಾವ್ ಆಗಲು ಸುಶಾಂತ್ ಸ್ಥಳದಿಂದ ಓಡಿದ್ದು, ಬಳಿಕ 2ನೇ ಮಹಡಿ ಮೇಲಿಂದ ಕೆಳಕ್ಕೆ ಆರೋಪಿಗಳು ತಳ್ಳಿದ್ದಾರೆ. ಈ ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ಸೇರಿಕೊಂಡಿದ್ದು, ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದರು. ತನಿಖೆ ಮುಂದುವರಿಯುತ್ತಿದ್ದು, ಪೊಲೀಸರು ಆರೋಪಿಗಳ ಇತರೆ ನೈತಿಕ ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : BMTC ಬಸ್‌ಗಳಲ್ಲಿ ಹಾಕಿದ್ದ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಕಿತ್ತೆಸೆದು ‘ಯುವ ಕರ್ನಾಟಕ ಸಂಘಟನೆ’ ಹೋರಾಟ



















