ಮುಂಬೈ : ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ಓಂಕಾರ್ ಶಿಂಧೆ ಬಂಧಿತ ಆರೋಪಿ.
ಪ್ರೊ. ಅಲೋಕ್ ಸಿಂಗ್ ಅವರು ವಿಲೇ ಪಾರ್ಲೆಯ ಪ್ರಮುಖ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲೋಕ್ ಸಿಂಗ್ ಮತ್ತು ಆರೋಪಿ ಶಿಂಧೆ ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸಣ್ಣ ವಿಚಾರವೊಂದಕ್ಕೆ ಇಬ್ಬರ ನಡುವೆ ಜಗಳವಾಗಿ ಮಾತಿನ ಚಕಮಕಿ ಮಾರಕ ತಿರುವು ಪಡೆದುಕೊಂಡಿತ್ತು. ಈ ವೇಳೆ ತಾಳ್ಮೆ ಕಳೆದುಕೊಂಡು ಹರಿತವಾದ ಚಾಕುವಿನಿಂದ ಪ್ರೊಫೆಸರ್‌ಗೆ ಹೊಟ್ಟೆಗೆ ಶಿಂಧೆ ಹಲವು ಬಾರಿ ಇರಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ಪ್ರೊಫೆಸರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೊರಿವಲಿ ಜಿಆರ್‌ಪಿ ಠಾಣೆ ಪೊಲೀಸರು ತನಿಖೆ ನಡೆಸಿ ಹತ್ಯೆಯ ಸ್ವಲ್ಪ ಸಮಯದ ನಂತರ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ ಪಾದಚಾರಿ ಸೇತುವೆ (ಎಫ್‌ಒಬಿ) ದಾಟಿ ಪರಾರಿಯಾಗುತ್ತಿದ್ದ ಆರೋಪಿ ಶಿಂಧೆಯನ್ನು ಬಂಧಿಸಿದ್ದಾರೆ. ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಸಿಂಗ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ : ಸರ್ಕಾರಿ ಬಸ್‌ಗಳಲ್ಲಿ ಹಾಕಿದ್ದ ಗುಟ್ಕಾ, ಪಾನ್ ಜಾಹೀರಾತು ಕಿತ್ತೆಸೆದ ಯುವಕರು.. ವಿಡಿಯೋ ವೈರಲ್!



















