ಬೆಂಗಳೂರು : ಯುವತಿಯನ್ನು ಸಾರ್ವಜನಿಕ ಸ್ಥಳದಲ್ಲಿ ತಬ್ಬಿ ಅಸಭ್ಯ ವರ್ತಿಸಿದ ಡೆಲಿವರಿ ಬಾಯ್‌ಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯ ಮುಂದೆ ಬಿದ್ದಿದ್ದ ಬಾಕ್ಸ್‌ನ್ನು ಯುವತಿ ತೆಗೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಯುವಕ ರಸ್ತೆಯಲ್ಲಿ ಬಟ್ಟೆಬಿಚ್ಚಿ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಪ್ರತಿರೋಧಿದ್ದಕ್ಕೆ ಯುವತಿಯ ಕೆನ್ನೆಗೆ ಹೊಡೆದಿದ್ದಾನೆ. ಬಳಿಕ ಯುವತಿ ಕಿರುಚಾಡಿದಾಗ ಕಾಮುಕ ಮುನಿರುದ್ದೀನ್ ಖಾನ್ ಅಲ್ಲಿಂದ ಪರಾರಿಯಾಗಿದ್ದ.
ಘಟನೆ ಬಳಿಕ ಯುವತಿ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆ ನಡೆಸಿ ಮುನಿರುದ್ದೀನ್ ಖಾನ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ನೆರೆಮನೆಯ ಮಗುವಿನ ಅನಾರೋಗ್ಯಕ್ಕೆ ಮಾಟಮಂತ್ರ ಕಾರಣ ಎಂದು ಆರೋಪ | ಮಹಿಳೆಯ ಬರ್ಬರ ಹತ್ಯೆ


















