ಬೆಂಗಳೂರು: ಆಧಾರ್ ಕಾರ್ಡ್ ಸೈಜ್ ದೊಡ್ಡದಿದೆ. ಅದನ್ನು ಪರ್ಸ್‌ನಲ್ಲಿ ಇಟ್ಟುಕೊಂಡು ಓಡಾಡಲು ಆಗುವುದಿಲ್ಲ. ಈ ಆಧಾರ್ ಕಾರ್ಡ್ ಬೇಸರವಾಯ್ತು ಎಂದು ಅನಿಸಿದವರಿಗೆ ಆಧಾರ್ ಸ್ಮಾರ್ಟ್ ಕಾರ್ಡ್ ಲಭ್ಯವಿದೆ. ಎಟಿಎಂ ರೀತಿಯ ಆಧಾರ್ ಸ್ಮಾರ್ಟ್ ಕಾರ್ಡ್ ಅನ್ನು ಮನೆಯಲ್ಲಿ ಕುಳಿತೇ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಬಹುದಾಗಿದೆ. ಆದರೆ, ಹೀಗೆ ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯಲು ನಿಗದಿಪಡಿಸಿದ್ದ ಶುಲ್ಕದಲ್ಲಿ ಈಗ 25 ರೂಪಾಯಿ ಏರಿಕೆ ಮಾಡಲಾಗಿದೆ. ಇದುವರೆಗೆ 50 ರೂಪಾಯಿ ಶುಲ್ಕವಿತ್ತು. 2026ರ ಜನವರಿ 1ರಿಂದ ಅದು 75 ರೂ.ಗೆ ಏರಿಕೆಯಾಗಿದೆ.
ಆಧಾರ್ ಸ್ಮಾರ್ಟ್ ಕಾರ್ಡ್ ಅಥವಾ ಪಿವಿಸಿ ಕಾರ್ಡ್ ಕಾಂಪ್ಯಾಕ್ಟ್ ಗಾತ್ರದಿಂದಾಗಿ ಎಲ್ಲೆಡೆ ಒಯ್ಯಲು ಸುಲಭವಾಗುತ್ತದೆ. ಇದನ್ನು ಕ್ರಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ರೀತಿ ಪರ್ಸ್ ನಲ್ಲಿ ಇಟ್ಟುಕೊಂಡು ತಿರುಗಾಡಬಹುದಾಗಿದೆ. ಹಾಗೆಯೇ, ಇದು ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ. ಕ್ಯೂಆರ್ ಕೋಡ್, ಹೊಲೊಗ್ರಾಮ್ ತಂತ್ರಜ್ಞಾನ ಇರುವುದರಿಂದ ಸುರಕ್ಷತೆ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ.
ಏರ್ ಪೋರ್ಟ್ ಸೇರಿ ಹಲವೆಡೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಆಗೆಲ್ಲ ಸ್ಮಾರ್ಟ್ ಕಾರ್ಡ್ ಅನ್ನು ಕೂಡ ತೋರಿಸಬಹುದಾಗಿದೆ. ಹಾಗೆಯೇ, ಇದು ಆಧಾರ್ ಸ್ಮಾರ್ಟ್ ಕಾರ್ಡ್ ಆಗಿರುವುದರಿಂದ ಕಳೆದುಹೋದರೂ ಚಿಂತೆ ಮಾಡಬೇಕಿಲ್ಲ. ಒರಿಜಿನಲ್ ಕಾರ್ಡ್ ಕಳೆದರೆ ಮತ್ತೆ ಅರ್ಜಿ ಸಲ್ಲಿಸಬೇಕು. ಸ್ಮಾರ್ಟ್ ಕಾರ್ಡ್ ಕಳೆದರೆ, 75 ರೂಪಾಯಿಗೆ ಮತ್ತೊಂದು ಕಾರ್ಡ್ ಬುಕ್ ಮಾಡಬಹುದು.
ಪಿವಿಸಿ ಆಧಾರ್ ಕಾರ್ಡ್ ಬುಕ್ ಮಾಡುವುದು ಹೇಗೆ?
- ಮೊದಲಿಗೆ UIDAI ಅಧಿಕೃತ ವೆಬ್ಸೈಟ್ ಆಗಿರುವ uidai.gov.inಗೆ ಭೇಟಿ ನೀಡಬೇಕು. ಅಲ್ಲಿ Order Aadhaar PVC Card ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿಯನ್ನು ಅನ್ನು ನಮೂದಿಸಬೇಕು.
- ಸ್ಕ್ರೀನ್ ಮೇಳೆ ತೋರಿಸಲಾದ ಕ್ಯಾಪ್ಚಾ ಕೋಡ್ ಭರ್ತಿ ಮಾಡಿ ಮತ್ತು Send OTP ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ಮೊಬೈಲ್ ಗೆ ಬಂದ OTPಯನ್ನು ನಮೂದಿಸಬೇಕು.
- ನಿಮ್ಮ ಆಧಾರ್ ಕಾರ್ಡ್ ನ ಪ್ರಿವ್ಯೂ (Preview) ಪರದೆಯಲ್ಲಿ ಕಾಣಿಸುತ್ತದೆ. ನಿಮ್ಮ ವಿವರಗಳನ್ನು ಪರಿಶೀಲಿಸಿ.
- ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 75 ರೂಪಾಯಿ ಪಾವತಿಸಬೇಕು. ಇದಾದ ಬಳಿಕ ನಿಮ್ಮ ಪರ್ಮನೆಂಟ್ ಅಡ್ರೆಸ್ ಗೆ ಕಾರ್ಡ್ ಕಳುಹಿಸಲಾಗುತ್ತದೆ.
ಇದನ್ನೂ ಓದಿ : ರಾಜ್ಯಾದ್ಯಂತ ಕೈಗೆ ಕಪ್ಪು ಪಟ್ಟಿ ಧರಿಸಿ ಶಾಲಾ ಶಿಕ್ಷಕರಿಂದ ಪಾಠ | ಕಾರಣವೇನು?


















