ಬೆಂಗಳೂರು | ಯಲಹಂಕದ ಕೋಗಿಲು ಲೇಔಟ್ ಸರ್ಕಾರಿ ಜಾಗ ಒತ್ತುವರಿ ಪ್ರಕರಣವು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪದಡಿ ಈಗಾಗಲೇ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಅಧಿಕಾರಿಗಳ ಸಮೀಕ್ಷೆಯಲ್ಲಿ ಮತ್ತೊಂದು ಶಾಂಕಿಗ್ ವಿಚಾರ ಬಯಲಾಗಿದೆ. ಕೋಗಿಲು ಬಡಾವಣೆಯಲ್ಲಿ ನಿರಾಶ್ರಿತರ ಪಟ್ಟಿ ಬಿಡುಗಡೆಯಾಗಿದ್ದು, 76 ಕುಟುಂಬಗಳು ವಾಸ ಮಾಡ್ತಿರೋದು ಕಳೆದ 6 ತಿಂಗಳಿನಿಂದಷ್ಟೇ ಅನ್ನೋದು ಬೆಂಕಿಗೆ ಬಂದಿದೆ. ಇದನ್ನ ಕಂಡು ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗಿದ್ದಾರೆ.
ಹೌದು.. ಕೋಗಿಲು ಬಡಾವಣೆಯಲ್ಲಿರುವ ಒಟ್ಟು 119 ಕುಟುಂಬಗಳ ಪೈಕಿ 76 ಕುಟುಂಬಗಳು ವಾಸ ಮಾಡ್ತಿರೋದು ಕಳೆದ 6 ತಿಂಗಳಿನಿಂದ. ಉಳಿದ 43 ಕುಟುಂಬಗಳಲ್ಲಿ 37 ಕುಟುಂಬಗಳು ಬೆಂಗಳೂರು ಮೂಲದವರೇ, ಇನ್ನುಳಿದ 6 ಕುಟುಂಬಗಳು ಕೆಲ ವರ್ಷಗಳ ಹಿಂದೆ ಕೋಗಿಲು ಲೇಔಟ್‌ಗೆ ಬಂದು ನೆಲೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ 37 ಕುಟುಂಬಗಳು ಹೊರತುಪಡಿಸಿದ್ರೆ, ಉಳಿದೆಲ್ಲರು ವಲಸಿಗರು ಎಂದು ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಇಂದು ಸಣ್ಣ ಲಿಸ್ಟ್ ಸಲ್ಲಿಕೆ ಆಗಲಿದೆ. ಸಚಿವ ಸಂಪುಟ ಸಭೆಯಲ್ಲೂ ಕೂಡ 37 ಅರ್ಹರ ಬಗ್ಗೆ ಚರ್ಚೆ ಆಗುವ ಸಾಧ್ಯತೆಯಿದೆ. 37 ಮಂದಿ ಅರ್ಹರಾಗಿದ್ದು, ದಾಖಲಾತಿಗಳನ್ನ ಪರಿಶೀಲಿಸಲಾಗುತ್ತಿದೆ. ಪೊಲೀಸ್ ವೆರಿಫಿಕೇಷನ್ ಆಗಿರುವ ಅರ್ಹರಿಗೆ ಮನೆ ಸಿಗಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಬರುವ ಶೈಕ್ಷಣಿಕ ವರ್ಷದಿಂದ ಶಿಕ್ಷಕರಿಗೆ, ಮಕ್ಕಳಿಗೆ ಫೇಸಿಯಲ್ ಅಟೆಂಡೆನ್ಸ್ ಕಡ್ಡಾಯ | ಮಧುಬಂಗಾರಪ್ಪ



















