ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರದಲ್ಲೇ ಸ್ಟ್ರೀಟ್ ಪಾರ್ಕಿಂಗ್ ನಿಯಮ ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದಕ್ಕೂ ಕಾಸು ಕೊಡಬೇಕಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಸ್ಟ್ರೀಟ್‌ನಲ್ಲಿ ಪೇ & ಪಾರ್ಕಿಂಗ್ ರೂಲ್ಸ್ ಜಾರಿಗೆ ತರಲು ಜಿಬಿಎ ಸಿದ್ಧತೆ ನಡೆಸಿದೆ. ಮೊದಲು ಹೆಬ್ಬಾಳ, ಕಮರ್ಷಿಯಲ್ ಸ್ಟ್ರೀಟ್, ಯಲಹಂಕದಲ್ಲಿ ಜಾರಿಗೆ ಸಜ್ಜಾಗಿದೆ.
ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು?
1 ಗಂಟೆಗೆ ಫೋರ್ ವ್ಹೀಲರ್‌ಗೆ – 30 ರೂ.
ದಿನಕ್ಕೆ – 150 ರೂ.
ತಿಂಗಳ ಪಾಸ್ ವ್ಯವಸ್ಥೆ – 3,000 ರೂ.
ದ್ವಿಚಕ್ರ ವಾಹನಕ್ಕೆ 1 ಗಂಟೆಗೆ – 15 ರೂ.
ದಿನಕ್ಕೆ – 75 ರೂ.
ತಿಂಗಳಿಗೆ – 1,500 ರೂ.
ಸದ್ಯ 35 ರಸ್ತೆಯಲ್ಲಿ ಪೇ & ಪಾರ್ಕ್ ಪ್ಲ್ಯಾನ್ ರೂಪಿತವಾಗಿದ್ದು, 16 ಕೋಟಿ ಆದಾಯದ ನಿರೀಕ್ಷೆಯಲ್ಲಿ ಜಿಬಿಎ ಇದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಕೂಲಿ ಕಾರ್ಮಿಕರ ದಾರಿತಪ್ಪಿಸುತ್ತಿದೆ : ಪ್ರಲ್ಹಾದ ಜೋಶಿ ವಾಗ್ದಾಳಿ


















