ಬೆಂಗಳೂರು : ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುತ್ತಿದ್ದ ಬೃಹತ್ ಅಂತರರಾಜ್ಯ ನಕಲಿ ಬಿಲ್ ಜಾಲವೊಂದನ್ನು ಭೇದಿಸಿ, ನಾಲ್ವರನ್ನು ಬಂಧಿಸುವಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಜಾರಿದಳ ಯಶಸ್ವಿಯಾಗಿದೆ.
ತಮಿಳುನಾಡಿನ ಪೆರ್ನಂಪಟ್ಟು ಮೂಲದ ಸಹೋದರರಾದ ಇರ್ಬಾಜ್ ಹ್ಮದ್, ನಫೀಜ್ ಅಹ್ಮದ್ ಮತ್ತು ಬೆಂಗಳೂರಿನ ಎದ್ದಲ ಪ್ರತಾಪ್, ರೇವತಿ ಬಂಧಿತ ಆರೋಪಿಗಳು. ಬಂಧಿತರಿಂದ 24 ಮೊಬೈಲ್ ಫೋನ್ಗಳು, 51 ಸಿಮ್ ಕಾರ್ಡ್ಗಳು, ಪೆನ್ ಡ್ರೈವ್ಗಳು ಮತ್ತು ನಕಲಿ ರಬ್ಬರ್ ಸ್ಟಾಂಪ್ಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬರೋಬ್ಬರಿ 1,464 ಕೋಟಿ ಮೌಲ್ಯದ ನಕಲಿ ವಹಿವಾಟು ನಡೆಸಿ, ಸರ್ಕಾರಕ್ಕೆ ₹355 ಕೋಟಿ ವಂಚಿಸಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯು ತಮಿಳುನಾಡು ವಾಣಿಜ್ಯ ತೆರಿಗೆ ಅಧಿಕಾರಿಗಳ ಸಹಕಾರದೊಂದಿಗೆ ಅಂತರರಾಜ್ಯ ಜಾಲವನ್ನು ಸೆರೆ ಹಿಡಿಯಲಾಗಿದೆ.
ವಂಚಕರು ಸಿಮೆಂಟ್, ಕಬ್ಬಿಣ ಮತ್ತು ಸ್ಟೀಲ್ ಹಾಗೂ ಇತರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಹೆಸರಿನಲ್ಲಿ ನಕಲಿ ವಹಿವಾಟು ನಡೆಸುತ್ತಿದ್ದರು. ಯಾವುದೇ ಸರಕುಗಳ ಸಾಗಾಟವಿಲ್ಲದೆ ಕೇವಲ ಕಾಗದದ ಮೇಲೆ 21,464 ಕೋಟಿ ಮೊತ್ತದ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಿ, ಅಂದಾಜು 7355 ಕೋಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ವಂಚಿಸಿದ ಬಗೆ:
ಆನ್ಲೈನ್ ಪ್ಲಾಟ್ಫಾರ್ಮ್ಗಳಿಂದ ಸ್ಟಾಂಪ್ ಪೇಪರ್ಗಳನ್ನು ತರಿಸಿ, ನಕಲಿ ಬಾಡಿಗೆ ಒಪ್ಪಂದಗಳು, ಭೂಮಾಲೀಕರ ಮತ್ತು ಬಾಡಿಗೆದಾರರ ನಕಲಿ ಸಹಿಗಳು ಹಾಗೂ ನಕಲಿ ನೋಟರಿ ದೃಢೀಕರಣಗಳನ್ನು ಬಳಸಿ ಜಿಎಸ್ಟಿ ನೋಂದಣಿಗಳನ್ನು ಮಾಡಲಾಗಿತ್ತು ಈ ನಕಲಿ ದಾಖಲೆಗಳ ಮೂಲಕ ‘ಶೆಲ್ ಕಂಪನಿ’ಗಳನ್ನು (Shell Entities) ಸೃಷ್ಟಿಸಿ, ಅವುಗಳ ಮೂಲಕ ನಕಲಿ ಬಿಲ್ ಹರಿದಾಡುವಂತೆ ಮಾಡಿ ನಂತರ ಅಡಿಟ್ನಿಂದ ತಪ್ಪಿಸಿಕೊಳ್ಳಲು ಜಿಎಸ್ಟಿ ನೋಂದಣಿಯನ್ನು ತಾವೇ ರದ್ದುಗೊಳಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಸದ್ಯ ಜಿಎಸ್ಟಿ ವಂಚಕರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದ್ದು ತಂತ್ರಜ್ಞಾನ ಆಧಾರಿತ ಕಾರ್ಯಾಚರಣೆಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆ ದಕ್ಷಿಣ ವಲಯದ ಜಾರಿದಳ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ತಾಯಿ ವಿರುದ್ಧ ಅಕ್ರಮ ಜಾಗ ಒತ್ತುವರಿ ಆರೋಪ | ಕೋರ್ಟ್ ಆದೇಶದಂತೆ ಕಾಂಪೌಂಡ್ ತೆರೆವುಗೊಳಿಸಿದ ಮಾಲೀಕ!



















