ಕೋಲಾರ : 108 ಕೆಜಿ ಪುಳಿಯೋಗರೆ ಅನ್ನದಲ್ಲಿ ತಿಮ್ಮಪ್ಪ ಮೂಡಿ ಬಂದಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಗ್ರಾಮದ ವಿಜಯೇಂದ್ರ ಸ್ವಾಮಿ ದೇಗುಲದಲ್ಲಿ ನಡೆದಿದೆ.
ಹೊಸ ವರ್ಷ ಹಿನ್ನಲೆ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ಹರಿದು ಬಂದಿದ್ದು, ತಿರುಪತಿ ದೇವಸ್ಥಾನ ಮಾದರಿಯಲ್ಲಿ ತಿರುಪ್ಪಾವಡಿಯಲ್ಲಿ ವೆಂಕಟೇಶ್ವರ ಮೂಡಿ ಬಂದಿದ್ದಾನೆ. ಕಳೆದ 25 ವರ್ಷದಿಂದ ತಿರುಪ್ಪಾವಡಿಯಲ್ಲಿ ದೇವರ ಮೂರ್ತಿ ದರ್ಶನಕ್ಕೆ ಸಕಲ ಸಿದ್ಧತೆ ಮಾಡುತ್ತಿದ್ದರು.
ದೇಗುಲದಲ್ಲಿ ಅರ್ಚಕರು ಭಕ್ತರಿಗೂ ಪುಳಿಯೋಗರೆ ಅನ್ನ ಪ್ರಸಾದವಾಗಿ ನೀಡಿದ್ದಾರೆ. ಈ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರುವ ಬೇತಮಂಗಲ ಗ್ರಾಮದ ವಿಜಯೇಂದ್ರ ಸ್ವಾಮಿ ದೇವಾಲಯ ದೇವರ ದರ್ಶನ ಪಡೆಯಲು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಆಗಮಿಸಿದ್ದರು.
ಇದನ್ನೂ ಓದಿ : ಹೊಸ ವರ್ಷಕ್ಕೆ ವಿವಿಧ ಬಗೆಯ ಹೂವುಗಳಿಂದ ಸಿಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ | ಭಕ್ತರಿಂದ ಅಲಂಕಾರ ಸೇವೆ



















