ಬೆಳಗಾವಿ : ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಜನ ಸಮೂಹ ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ಬೆಳಗಾವಿ ನಗರದ ಜೋಶಿ ಮಾಳಾದಲ್ಲಿ ಸೃಷ್ಠಿಯಾಗಿದೆ.
ನಾಯಿಗಳ ಹಾವಳಿಗೆ ಬೆಳಗಾವಿ ನಿವಾಸಿಗಳು ಕಂಗಾಲಾಗಿದ್ದಾರೆ. ಮಕ್ಕಳು, ವೃದ್ಧರು ಹೊರಗಡೆ ಹೋಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ವರ್ಷ ಜಿಲ್ಲೆಯಲ್ಲಿ 19,729 ನಾಯಿ ಕಚ್ಚಿದ ಪ್ರಕರಣ ದಾಖಲಾಗಿದೆ. ಗುಂಪು ಕಟ್ಟಿಕೊಂಡು ಡೆಡ್ಲಿ ಅಟ್ಯಾಕ್‌ಗೆ ಬೀದಿ ನಾಯಿಗಳು ಮುಂದಾಗಿವೆ.
ರಸ್ತೆಯ ಮೇಲೆ ನಡೆದುಕೊಂಡು ಹೋಗ್ತಿರೋ ಕುಟುಂಬದ ಮೇಲೆ ನಾಯಿಗಳು ದಾಳಿಯ ಯತ್ನ ಮಾಡಿವೆ. ಏನು ಮಾಡಲು ಗೋಚರಿಸದೇ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ವರ್ಷದಿಂದ ಇದೇ ಸಮಸ್ಯೆಯಲ್ಲಿ ಬಳಲುತ್ತಿರುವ ಜನ. ಇದೀಗ ಕೂಡಲೇ ನಾಯಿಗಳನ್ನ ಬೇರೆಡೆಗೆ ಶಿಪ್ಟ್ ಮಾಡುವಂತೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಿಗೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಮತ್ತೆ ಟೈಗರ್ ಅಟ್ಯಾಕ್ | ಜಾನುವಾರು ಬಲಿ ; ಎತ್ತಿನ ಶವ ಎದುರಿಟ್ಟು ರೈತರ ಪ್ರತಿಭಟನೆ



















