ದಾವಣಗೆರೆ | ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ ಮಾಡಲು ಹೋಗಿ ರೈತ ಸಜೀವ ದಹನವಾಗಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ (75) ಎನ್ನುವರ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಳೆ ಮರ ಬೆಳೆಯಲಾಗಿತ್ತು.
ಇಂದು ಏಕಾಏಕಿ ತಾಳೆ ಮರಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗಾಬರಿಗೊಂಡ ರೈತ ಈಶ್ವರಪ್ಪ, ತಾನು ಹಾಕಿದ್ದ ತಾಳೆ ಉಳಿಸಲುಕೊಳ್ಳಲು ಮುಂದಾಗಿದ್ದಾರೆ. ಆದ್ರೆ, ದುರ್ವೈವ ಬೆಂಕಿಯಲ್ಲಿ ತಾಳೆ ಜೊತೆ ರೈತ ಈಶ್ವರಪ್ಪ ಸಹ ಸಜೀವದಹನವಾಗಿದ್ದಾರೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಕಿಕ್ಕಿರಿದ ಜನಸಾಗರ | ರಾಯರ ಸನ್ನಿಧಿಗೆ ಒಂದೇ ದಿನ ಹರಿದುಬಂದ ಲಕ್ಷಾಂತರ ಭಕ್ತರು!



















