ಮೈಸೂರು : ಇಲ್ಲಿನ ಮೃಗಾಲಯದಲ್ಲಿದ್ದ ಐದು ವರ್ಷದ ತಾಯಮ್ಮ ಎಂಬ ಹುಲಿ ಅನಾರೋಗ್ಯದಿಂದ ಗುರುವಾರ (ಡಿ.25) ಮೃತಪಟ್ಟಿದೆ.
2021ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ ಮಾಡಿ, ಮೈಸೂರು ಮೃಗಾಲಯಕ್ಕೆ ಈ ಹುಲಿಯನ್ನು ತಂದು ಆರೈಕೆ ಮಾಡಲಾಗುತ್ತಿತ್ತು.
ಕಳೆದ 10 ದಿನಗಳಿಂದ ರಕ್ತಕಣದ ಸಮಸ್ಯೆಯಿಂದ ಬಳಲುತ್ತಿತ್ತು. ಈ ಸಂಬಂಧ ಚಿಕಿತ್ಸೆ ನೀಡಲಾಗಿತ್ತು. ಇನ್ನೂ ಅನಾರೋಗ್ಯದಿಂದ ಬಳುತ್ತಿದ್ದ ಕಾರಣ ತಾಯಮ್ಮ ಹುಲಿ ಆಹಾರ ತ್ಯಜಿಸಿತ್ತು. ಚಿಕಿತ್ಸೆ ಕೊಡಿಸಿದರೂ ಕೂಡ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಕಿಕ್ಕಿರಿದ ಜನಸಾಗರ | ರಾಯರ ಸನ್ನಿಧಿಗೆ ಒಂದೇ ದಿನ ಹರಿದುಬಂದ ಲಕ್ಷಾಂತರ ಭಕ್ತರು!



















